ಮಡಿಕೇರಿ, ಮಾ. ೨೫: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ವತಿಯಿಂದ ಏರ್ಪಡಿಸಲಾಗಿದ್ದ ಕರ್ನಾಟಕ ಶಾಸ್ತಿçÃಯ ಸಂಗೀತ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಟಿ.ಎಲ್. ಹರ್ಷಿತ್ ಪೊನ್ನಪ್ಪ ಶೇ. ೭೬.೨೫ ಅಂಕ ಗಳಿಸುವದರೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ. ಮಡಿಕೇರಿಯ ಸಂತ ಜೋಸೆಫರ ಶಾಲೆಯಲ್ಲಿ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಈತ ಮಡಿಕೇರಿಯ ದೇಚೂರು ನಿವಾಸಿ ತಾಪಂಡ ಲೋಕೇಶ್ ಹಾಗೂ ಶುಭ ದಂಪತಿ ಪುತ್ರ. ಸಂಗೀತ ಶಿಕ್ಷಕಿ ಸರೋಜ ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾನೆ.