ಕೂಡಿಗೆ, ಮಾ. ೨೧: ರಾಜ್ಯ ಸರಕಾರವು ನೂತನವಾಗಿ ಘೋಷಣೆ ಮಾಡಿರುವ ಕೊಡಗು ವಿಶ್ವವಿದ್ಯಾನಿಲಯದ ಮೊದಲ ಕುಲಪತಿಯಾಗಿ ಡಾ, ಅಶೋಕ ಸಂಗಪ್ಪ ಆಲೂರು ಅಧಿಕಾರ ಸ್ವೀಕರಿಸಿದರು.

ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದಲ್ಲಿರುವ ಕೊಡಗು ಜಿಲ್ಲೆಯ ಪ್ರಥಮ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಡಾ, ಅಶೋಕ ಸಂಗಪ್ಪ ಆಲೂರು ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ಪ್ರಭಾರ ನಿರ್ದೇಶಕ ಪ್ರೊ. ಕೆ.ಕೆ. ಧರ್ಮಪ್ಪ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ಸಂದರ್ಭ ಪ್ರಭಾರ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಪ್ರೊ. ಎಂ. ಜಯಶಂಕರ್, ಜೀವರಸಾಯನಶಾಸ್ತç ವಿಭಾಗದ ಪ್ರಾಧ್ಯಾಪಕ ಪ್ರೊ, ಕೆ, ಎಸ್, ಚಂದ್ರಶೇಖರಯ್ಯ, ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಜಿ. ಶಾಮಸುಂದರ ಸೇರಿದಂತೆ ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.