ಮುಳ್ಳೂರು, ಮಾ. ೨೩: ಎಂದಿನAತೆ ಕಾರ್ಮಿಕರು ಗ್ರಾ.ಪಂ.ಗೆ ಸೇರಿದ ಟ್ರಾö್ಯಕ್ಟರ್‌ನಲ್ಲಿ ಪಟ್ಟಣದ ಕಸ ವಿಲೇವಾರಿ ಮಾಡಲು ಕಸ ವಿಲೇವಾರಿ ಮಾಡುವ ಸ್ಥಳಕ್ಕೆ ತೆರಳುತ್ತಿದ್ದಾಗ ೩ ಮಂದಿ ವೈಯಕ್ತಿಕ ವಿಚಾರವನ್ನು ಮುಂದಿಟ್ಟುಕೊAಡು ಕಸ ವಿಲೇವಾರಿ ವಾಹನವನ್ನು ಪಿಕಪ್ ವಾಹನದಲ್ಲಿ ಅಡ್ಡಗಟ್ಟಿ ಈ ಸ್ಥಳದಲ್ಲಿ ಕಸ ವಿಲೇವಾರಿ ಮಾಡದಂತೆ ಕಾರ್ಮಿಕರಿಗೆ ಬೆದರಿಸಿ ಅಡ್ಡಿಪಡಿಸಿದ ಘಟನೆ ಮಂಗಳವಾರ ಬೆಳಗ್ಗೆ ಶನಿವಾರಸಂತೆಯಲ್ಲಿ ನಡೆಯಿತು.

ಈಗಾಗಲೆ ಪಟ್ಟಣದ ಕಸ ವಿಲೇವಾರಿಗಾಗಿ ಪಕ್ಕದ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ೨ ಎಕರೆ ಜಾಗದಲ್ಲಿ ಉಭಯ ಗ್ರಾ.ಪಂ. ಗಳು ಕಸವಿಲೇವಾರಿ ಮಾಡಲು ಸರಕಾರ ಸ್ಥಳವನ್ನು ಗುರುತುಪಡಿಸಿದೆ. ಶನಿವಾರಸಂತೆ ಗ್ರಾ.ಪಂ. ವತಿಯಿಂದ ಕಸವಿಲೇವಾರಿ ಘಟಕದ ಕಾವiಗಾರಿಯೂ ಸಂಪೂರ್ಣಗೊAಡಿದ್ದು ಇನ್ನು ೧೫ ದಿನಗಳೊಳಗೆ ಇದೆ ಹೊಸ ಘಟಕದಲ್ಲಿ ಕಸ ವಿಲೇವಾರಿ ಮಾಡಲು ಶನಿವಾರಸಂತೆ ಗ್ರಾ.ಪಂ. ಆಡಳಿತ ಮಂಡಳಿ ನಿರ್ಣಯಿಸಿದೆ. ಶನಿವಾರಸಂತೆ ಆಸ್ಪತ್ರೆ ಸಮೀಪದ ಕಸ ವಿಲೇವಾರಿ ಮಾಡುತ್ತಿದ್ದ ಹಳೆ ಜಾಗದಲ್ಲಿ ತಾತ್ಕಾಲಿಕವಾಗಿ ಕಾರ್ಮಿಕರು ಕಸ ವಿಲೇವಾರಿ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಶನಿವಾರಸಂತೆ ಗ್ರಾ.ಪಂ.ಯ ಕಾರ್ಮಿಕರು ಟ್ರಾö್ಯಕ್ಟರ್‌ನಲ್ಲಿ ತ್ಯಾಜ್ಯ ತುಂಬಿಸಿಕೊAಡು ಸ್ಥಳಕ್ಕೆ ಬರುತ್ತಿದ್ದಂತೆ ಪಕ್ಕದ ಕಲ್ಯಾಣ ಮಂಟಪವೊAದರ ಮಾಲೀಕ ಅವರ ಪುತ್ರ ಮತ್ತು ಹಂಡ್ಲಿ ಗ್ರಾಮಕ್ಕೆ ಸೇರಿದ ವ್ಯಕ್ತಿ ಟ್ರಾö್ಯಕ್ಟರ್‌ಗೆ ಪಿಕಪ್ ವಾಹನದಲ್ಲಿ ಅಡ್ಡಗಟ್ಟಿದ್ದಾರೆ. ಈ ಸ್ಥಳದಲ್ಲಿ ಕಸ ವಿಲೇವಾರಿ ಮಾಡದಂತೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ನಡು ರಸ್ತೆಯಲ್ಲೆ ಕುರ್ಚಿಯನ್ನು ಹಾಕಿಕೊಂಡು ಕಸ ವಿಲೇವಾರಿಗೆ ಅಡ್ಡಿಪಡಿಸಿದ್ದಾರೆ, ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಕಾರ್ಮಿಕರು ಗ್ರಾ.ಪಂ.ಗೆ ಮಾಹಿತಿ ನೀಡಿದ ಹಿನ್ನೆಲೆ ಕೂಡಲೆ ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಆಡಳಿತ ಮಂಡಳಿಯ ಅಧ್ಯಕ್ಷರು, ಸರ್ವ ಸದಸ್ಯರು ಕಸವಿಲೇವಾರಿ ಮಾಡಲು ಅಡ್ಡಿಪಡಿಸಿದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡರು, ಇನ್ನು ೧೫ ದಿನದಲ್ಲಿ ಹೊಸ ಕಸ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಮಾಡಲಾಗುತ್ತದೆ ಅಲ್ಲಿಯವರೆಗೆ ಮಾತ್ರ ಈ ಸ್ಥಳದಲ್ಲಿ ಕಸ ವಿಲೇವಾರಿ ಮಾಡಬೇಕಾಗುತ್ತದೆ ಎಂದು ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳಿಗೆ ಗ್ರಾ.ಪಂ. ಸದಸ್ಯರು ಮನವರಿಕೆ ಮಾಡುತ್ತಿದ್ದರೂ ವ್ಯಕ್ತಿಗಳು ಇದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಮತ್ತೆ ಗ್ರಾ.ಪಂ. ಸದಸ್ಯರು ಹಾಗೂ ಅಡ್ಡಿಪಡಿಸುತ್ತಿದ್ದ ವ್ಯಕ್ತಿಗಳ ಮಧ್ಯೆ ವಾಗ್ವಾದ ನಡೆಯಿತು.

ಕಸ ವಿಲೇವಾರಿ ಮಾಡಲು ಅಡ್ಡಿಪಡಿಸುತ್ತಿರುವ ಕುರಿತು ಗ್ರಾ.ಪಂ. ಯವರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಎಸ್‌ಐ ಕಾಶಿನಾಥ್ ಮತ್ತು ಗೋವಿಂದ್‌ರಾಜ್ ಹಾಗೂ ಪೊಲೀಸ್ ಸಿಬ್ಬಂದಿ ಅಡ್ಡಿಪಡಿಸುತ್ತಿದ್ದ ಖಾಸಗಿ ವ್ಯಕ್ತಿಗಳನ್ನು ಅಲ್ಲಿಂದ ತೆರಳಲು ಸೂಚಿಸಿ ಕಸ ವಿಲೇವಾರಿ ಮಾಡಲು ಅವಕಾಶ ಮಾಡಿಕೊಟ್ಟರು.

ಗ್ರಾ.ಪಂ. ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್, ಉಪಾಧ್ಯಕ್ಷ ಎಸ್.ಆರ್. ಮಧು, ಸದಸ್ಯರಾದ ಎಸ್.ಎನ್. ರಘು, ಎಸ್.ಸಿ. ಶರತ್‌ಶೇಖರ್, ಸರ್ದಾರ್ ಆಹಮ್ಮದ್, ಸರೋಜ ಶೇಖರ್, ಆದಿತ್ಯ ಗೌಡ, ಸರಸ್ವತಿ, ಗ್ರಾ.ಪಂ. ಕಾರ್ಯದರ್ಶಿ ದೇವರಾಜ್ ಹಾಗೂ ಸ್ಥಳೀಯ ಮುಖಂಡರು ಸ್ಥಳಕ್ಕೆ ಆಗಮಿಸಿ ಕಾರ್ಮಿಕರು ಕಸ ವಿಲೇವಾರಿ ಮಾಡಲು ಅವಕಾಶ ಮಾಡಿಕೊಟ್ಟರು.