ಮಡಿಕೇರಿ, ಮಾ. ೨೪: ಪ್ರಸ್ತುತ ಮಾರ್ಚ್ ತಿಂಗಳು ಪೂರ್ಣ ಗೊಳ್ಳುವತ್ತ ತಲುಪುತ್ತಿದ್ದು, ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಅದರಲ್ಲೂ ವಿಶೇಷ ವಾಗಿ ಕಾಫಿಗೆ ಅಗತ್ಯವಾಗಿರುವ ಹೂಮಳೆಯ ನಿರೀಕ್ಷೆಯಲ್ಲಿ ಜನರು ಕಾಯುತ್ತಿದ್ದಾರೆ. ದಿನೇ ದಿನೇ ಹಗಲಿನ ವೇಳೆಯಲ್ಲಿ ಬಿಸಿಲಿನ ಪ್ರಖರತೆಯೂ ಹೆಚ್ಚಾಗುತ್ತಿದ್ದು, ಜಿಲ್ಲೆಯಾದ್ಯಂತ ನದಿ - ಕೆರೆಗಳಲ್ಲಿ ಸೇರಿದಂತೆ ಜಲ ಮೂಲಗಳಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿದೆ. ನೀರಿನ ಸೌಲಭ್ಯ ದೊಂದಿಗೆ ತೋಟಗಳಿಗೆ ನೀರು ಹಾಯಿಸಲು ಶಕ್ತರಾಗಿರು ವವರು ಈಗಾಗಲೇ ಈ ಕೆಲಸವನ್ನು ಪೂರೈಸಿಕೊಂಡಿದ್ದು, ಇದೀಗ ಬ್ಯಾಕಿಂಗ್ (ಪೂರಕ ನೀರು) ಒದಗಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ನೀರಿನ ಮಟ್ಟ ಇಳಕೆ ಯಾಗಿರುವುದು ಇದಕ್ಕೆ ಸಮಸ್ಯೆ ಯಾಗುತ್ತಿದೆ. ಕಳೆದ ನಾಲ್ಕೆöÊದು ದಿನಗಳ ಹಿಂದೆ ಜಿಲ್ಲೆಯಲ್ಲಿ ಮಳೆಯಾಗುವ ಸಂಭವವಿರುವುದಾಗಿ ಹವಾಮಾನ ಇಲಾಖೆಯ ಮಾಹಿತಿ ಇತ್ತು. ಅಲ್ಲದೆ, ವಾತಾವರಣದಲ್ಲೂ ಒಂದಷ್ಟು ಬದಲಾವಣೆ ಕಾಣುವ ಮೂಲಕ ವರ್ಷದ ಆರಂಭಿಕ ಹಂತದ ಅಗತ್ಯ ಮಳೆಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರು... ಜನರು ಇದ್ದರು. ಆದರೆ, ಜಿಲ್ಲೆಯ ಒಂದೆರಡು ಭಾಗಗಳಲ್ಲಿ ಮಾತ್ರ ಸಣ್ಣ ಪ್ರಮಾಣದ ಮಳೆಯಾಗಿದ್ದು, ಮತ್ತೆ ಬಿಸಿಲಿನ ವಾತಾವರಣವೇ ಕಂಡುಬರುತ್ತಿದೆ. ಇದರಿಂದಾಗಿ ಜನತೆ ಮತ್ತೆ ಮಳೆಯ ವಾತಾವರಣಕ್ಕೆ ಕಾಯುವಂತಾಗಿದೆ. ಪ್ರಸಕ್ತ ವರ್ಷ ಜನವರಿಯಲ್ಲೇ ಕೇವಲ ಒಂದು ದಿನ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗುವು ದರೊಂದಿಗೆ ಜಿಲ್ಲೆಯ ಹಲವು ಭಾಗಗಳಲ್ಲಿ ಸುಮಾರು ೧ರಿಂದ ೨ ಇಂಚುಗಳಷ್ಟು ಮಳೆ ಸುರಿದಿತ್ತು. ಆದರೆ ಈ ಮಳೆ ಸುರಿದಿದ್ದು ತೀರಾ ಮುಂಚಿತ ಅವಧಿಯ ಲ್ಲಾಗಿದ್ದರಿಂದ ಹೆಚ್ಚಿನ ಪ್ರಯೋಜನ ವಾಗಿರಲಿಲ್ಲ. ಈ ಮಳೆಯಿಂದ ಕಾಫಿ ಹೂ ಅರಳಿದ್ದರೂ, ಮೊಗ್ಗು ಅಷ್ಟಾಗಿ ಮುಂದುವರಿದಿರಲಿಲ್ಲವಾದ್ದರಿAದ ಆ ಸಂದರ್ಭದ ಮಳೆಯಿಂದ ಸೂಕ್ತ ಪ್ರಯೋಜನವಾಗಿಲ್ಲ ಎಂಬುದು ಅನುಭವಸ್ತರ ಮಾತಾಗಿದೆ. ಫೆಬ್ರವರಿ ಮಾಸಾಂತ್ಯದಿAದ ಮಾರ್ಚ್ ತಿಂಗಳಲ್ಲಿ ಸಿಗುವ ಮಳೆಯಿಂದಲೇ ಕಾಫಿಗೆ ಸಾಧಾರಣವಾಗಿ ಹೆಚ್ಚಿನ ಅನುಕೂಲ ವಾಗುತ್ತದೆ. ಆದರೆ, ಈ ಅಗತ್ಯ ಸಮಯದಲ್ಲಿ ಮಳೆಯಾಗುವ ಸನ್ನಿವೇಶ ಕಾಣದಿರುವುದು ನಿರಾಶೆ ಅನುಭವಿಸುವಂತಾಗಿದೆ. ಆರ್ಥಿಕವಾಗಿ ಸಬಲರಾಗಿರು ವವರು ಹಾಗೂ ನೀರಿನ ಅನುಕೂಲ ಇರುವವರು ಒಂದಷ್ಟು ಕೆಲಸ ಕಾರ್ಯಗಳನ್ನು ಪೂರೈಸಿ ಕೊಂಡಿರುವ ತೃಪ್ತಿಯಲ್ಲಿದ್ದರೆ, ಇನ್ನಿತ ರರು ಮಳೆಯನ್ನೇ ಅವಲಂಬಿಸ ಬೇಕಾಗಿದೆ. ಇದು ಕಾಫಿ ಬೆಳೆಗಾರರ ವಿಚಾರ ವಾದರೆ ಪ್ರಸ್ತುತ ಜಿಲ್ಲೆಯಾದ್ಯಂತ ದಿನೇ ದಿನೇ ನದಿ - ತೋಡು ಸೇರಿದಂತೆ ವಿವಿಧ ಜಲಮೂಲಗಳಲ್ಲಿ ಈ ವೇಳೆಗೇ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿ ರುವುದು ಭವಿಷ್ಯದ ಆತಂಕಕ್ಕೂ ಕಾರಣವಾಗುತ್ತಿದೆ. ಇನ್ನು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಬಿಸಿಲಿನ ತೀವ್ರತೆ ಇನ್ನಷ್ಟು ಹೆಚ್ಚಾಗಲಿ ರುವುದರಿಂದ ಈ ವರ್ಷ ಹಲವೆಡೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಏನಿದ್ದರೂ ಪ್ರಕೃತಿಯನ್ನೇ ಜನರು ಅವಲಂಬಿತರಾಗಬೇಕಿದ್ದು, ನಿರೀಕ್ಷೆ ಯಲ್ಲಿ ದಿನ ಕಳೆಯುವಂತಾಗಿದೆ.
ಅಕಾಲಿಕ ಮಳೆ, ತೋಟಗಳ ನಿರ್ವಹಣೆಗೆ ದುಬಾರಿ ವೆಚ್ಚ, ಕಾರ್ಮಿ ಕರ ಸಮಸ್ಯೆ ಹಾಗೂ ಹವಾಮಾನ ವೈಪರೀತ್ಯಗಳಿಂದ ಜೀವನ ಸಾಗಿಸುತ್ತಿರುವ ಕಾಫಿ ಬೆಳೆಗಾರರು ಮಾರ್ಚ್ ತಿಂಗಳಲ್ಲಿ ಮಳೆಯ ನಿರೀಕ್ಷೆಯಲ್ಲಿರುತ್ತಾರೆ. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಬೆಳೆಗಾರರಿಗೆ ಕಾಫಿ ತೋಟಕ್ಕೆ ನೀರು ಹಾಯಿಸುವ ಕೆಲಸ ತಪ್ಪಲಿದ್ದು, ಹಣ ಕೂಡ ಉಳಿತಾ ಯವಾಗಲಿದೆ. ಶನಿವಾರ ಕೊಡಗು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಯ ಕಾಫಿ ಬೆಳೆಗಾರರಿಗೆ ೧೦ ಹೆಚ್.ಪಿ. ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದು, ಈ ಘೋಷಣೆ ಜಾರಿಗೆ ಬಂದರೆ ಸಣ್ಣ ಬೆಳೆಗಾರರಿಗೆ ಬಹು ದೊಡ್ಡ ಅನುಕೂಲವಾಗಲಿದೆ ಎಂಬ ಆಶಾಭಾವನೆ ಎದುರಾಗಿದೆ. ಪ್ರಸ್ತುತ ಬೇಸಿಗೆಯಾಗಿರುವುದರಿಂದ ನೀರಿಗೆ ಸಮಸ್ಯೆ ಇದೆ. ಒಂದು ಎಕರೆಗೆ ನೀರು ಹಾಯಿಸಲು ರೂ. ೬ ಸಾವಿರ ಬೇಕಾಗುತ್ತದೆ. ಉತ್ತಮ ಮಳೆ ಯಾದರೆ ಮುಂದಿನ ವರ್ಷ ಉತ್ತಮ ಫಸಲು ನಿರೀಕ್ಷಿಸ ಬಹುದು ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಡಾ. ಕಾವೇರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.