ನಾಪೋಕ್ಲು, ಮಾ. ೨೩: ನಾಪೋಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೨೩ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಐದನೇ ದಿನದ ಪಂದ್ಯಾಟದಲ್ಲಿ ಮಂಡೇಟಿರ, ಅಳಮೇಂಗಡ, ಚೆಯ್ಯಂಡ, ಅಜ್ಜಮಾಡ, ಬೊಳ್ಳಚೆಟ್ಟಿರ, ಅಲ್ಲುಮಡ, ಬೊಟ್ಟೋಳಂಡ, ಬಾರಿಯಂಡ, ಮಾಚಂಗಡ, ಬಡ್ಡಿರ, ಕುಮ್ಮಂಡ, ಅಚ್ಚಪಂಡ, ಚೋಕಿರ, ಕನ್ನಂಡ, ಅಪ್ಪಚ್ಚಿರ, ಕುಂಡ್ಯೋಳAಡ, ಮತ್ರಂಡ, ಕರವಟ್ಟಿರ, ಕಾಳೇಂಗಡ, ಚೋಯಮಾಡಂಡ, ಆದೇಂಗಡ ತಂಡಗಳು ಮುಂದಿನ ಸುತ್ತು ಪ್ರವೇಸಿವೆ.

ಮಂಡೇಟಿರ ಮತ್ತು ನಡಿಕೇರಿಯಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಮಂಡೇಟಿರ ತಂಡವು ನಡಿಕೇರಿಯಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಅಳಮೇಂಗಡ ಮತ್ತು ಕುಂಡ್ರAಡ ತಂಡಗಳ ನಡುವಿನ ಪಂದ್ಯದಲ್ಲಿ ಅಳಮೇಂಗಡ ತಂಡವು ಕುಂಡ್ರAಡ ತಂಡವನ್ನು ೨-೦ ಗೋಲಿನ ಅಂತರದಿAದ ಪರಾಭವಗೊಳಿಸಿತು. ಚೆಯ್ಯಂಡ ಮತ್ತು ಬೊಟ್ಟಂಗಡ ತಂಡಗಳ ನಡುವಿನ ಸೆಣಸಾಟದಲ್ಲಿ ಚೆಯ್ಯಂಡ ತಂಡವು ಬೊಟ್ಟಂಗಡ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಅಜ್ಜಮಾಡ ತಂಡವು ಬೊಳ್ಳಚಂಡ ತಂಡವನ್ನು ೩-೦ ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೊಳ್ಳಚೆಟ್ಟಿರ ಮತ್ತು ಚೆರಿಯಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಚೆರಿಯಂಡ ತಂಡದ ಗೈರು ಹಾಜರಿನ ಕಾರಣ ಬೊಳ್ಳಚೆಟ್ಟಿರ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕೊಟ್ರಮಡ ಮತ್ತು ಅಲ್ಲುಮಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯದಲ್ಲಿ ಕೊಟ್ರಮಡ ತಂಡದ ಗೈರು ಹಾಜರಿನ ಹಿನ್ನೆಲೆಯಲ್ಲಿ ಅಲ್ಲುಮಡ ತಂಡವು ಮುಂದಿನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು. ಬೊಟ್ಟೋಳಂಡ ತಂಡವು ಮಂದನೆರವAಡ ತಂಡವನ್ನು ೬-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು.

ಮೈದಾನ ೨ರಲ್ಲಿ ನಡೆದ ಮಾಳೆಯಂಡ ಮತ್ತು ಬಾರಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಾರಿಯಂಡ ತಂಡವು ಮಾಳೆಯಂಡ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮಾಚಂಗಡ ತಂಡವು ನಾಯಕಂಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಡ್ಡಿರ ತಂಡವು ದಾಸಂಡ ತಂಡವನ್ನು ೧-೦ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು. ಕುಮ್ಮಡ ತಂಡವು ಚಂಗುಲAಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಅಚ್ಚಪಂಡ ತಂಡವು ಮುದ್ದಿಯಂಡ ತಂಡವನ್ನು ೩-೨ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅನ್ನರ್ಕಂಡ ತಂಡದ ಗೈರು ಹಾಜರಿನಿಂದ ಚೋಕಿರ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಕನ್ನಂಡ ಮತ್ತು ಅಪ್ಪಾರಂಡ ತಂಡಗಳ ನಡುವಿನ ಪಂದ್ಯದಲ್ಲಿ ಕನ್ನಂಡ ತಂಡವು ಅಪ್ಪಾರಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.

ಮೈದಾನ ೩ರಲ್ಲಿ ನಡೆದ ಅಪ್ಪಚ್ಚಿರ ಮತ್ತು ಪಟ್ಟಚೆರುವಂಡ ತಂಡಗಳ ನಡುವಿನ ಮೊದಲ ಸೆಣಸಾಟದಲ್ಲಿ ಅಪ್ಪಚ್ಚಿರ ತಂಡವು ಪಟ್ಟಚೆರುವಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಮಣಿಸಿ ಮುನ್ನುಗ್ಗಿತು. ಮೇಕತಂಡ ತಂಡದ ಗೈರು ಹಾಜರಿನಿಂದ ಕುಂಡ್ಯೋಳAಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಮತ್ರಂಡ ತಂಡವು ಕೋಡಿಮಣಿಯಂಡ ತಂಡವನ್ನು ೪-೩ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಕರವಟ್ಟಿರ ತಂಡವು ಚೇಮಿರ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ನೆಲ್ಲೀರ ತಂಡದ ಗೈರು ಹಾಜರಿನ ಕಾರಣ ಕಾಳೇಂಗಡ ತಂಡವು ಮುಂದಿನ ಸುತ್ತು ಪ್ರವೇಶಿಸಿತು. ಚೋಯಮಾಡಂಡ ತಂಡವು ಮಲ್ಚಿರ ತಂಡವನ್ನು ೪-೨ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಆದೇಂಗಡ ಮತ್ತು ಚಂಗೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆದೇಂಗಡ ತಂಡವು ಚಂಗೇಟಿರ ತಂಡವನ್ನು ೪-೩ ಗೋಲುಗಳ ಅಂತರದಿAದ ಮಣಿಸಿ ಮುನ್ನಡೆ ಸಾಧಿಸಿತು.

ವೀಕ್ಷಕ ವಿವರಣೆಗಾರರಾಗಿ ಮೂಡೆರ ಹರೀಶ್ ಕಾಳಯ್ಯ, ವಲ್ಲಂಡ ಸೋಮಣ್ಣ, ಚೀಯಾಂಡಿರ ಕಿಲನ್ ನಾಚಪ್ಪ, ಸುಬ್ರಮಣಿ, ಪೊನ್ನಪ್ಪ, ಮೊಣ್ಣಪ್ಪ, ತಿಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.

ತಾ. ೨೨ರ ಫಲಿತಾಂಶ

ತಾ. ೨೨ ರಂದು ನಡೆದ ಪಂದ್ಯಾಟದಲ್ಲಿ ಚಪ್ಪಂಡ, ಪೊನ್ನಚಂಡ, ಪೇರಿಯಂಡ, ಸಣ್ಣುವಂಡ, ಉದ್ದಪಂಡ, ಮೊಳ್ಳೆರ, ತಿರುಟೆರ, ಕುಂದತ್ ಮಾಳೇಟಿರ (ಕುಕ್ಲೂರು), ನೆರ್ಪಂಡ, ಕಂಬೀರAಡ, ಮಾರ್ಚಂಡ, ಕಾಂಡೆರ, ಅಮ್ಮಣಿಚಂಡ, ಕಳ್ಳಂಗಡ, ಪಟ್ಟಡ, ಚಿಂಡಮಡ, ಚೀಯಾಂಡಿರ, ತೀತಮಾಡ, ಪಾಲೆಕಂಡ, ಐನಂಡ, ಅಪ್ಪಂಡೆರAಡ, ಚೆಟ್ಟಿಯಾರಂಡ, ಚಿರಿಯಪಂಡ, ಚಟ್ಟಂಗಡ ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ.

-ಪಿ.ವಿ. ಪ್ರಭಾಕರ್