ಮಡಿಕೇರಿ, ಮಾ. ೨೩: ಸೋಮವಾರಪೇಟೆ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಕಾರ್ಯದರ್ಶಿ ಗಳ ನೂತನ ಸಂಘ ಅಸ್ತಿತ್ವಕ್ಕೆ ಬಂದಿದೆ.
ಸAಘದ ನೂತನ ಅಧ್ಯಕ್ಷರಾಗಿ ಗೌತಮ್ ಶಿವಪ್ಪ ಸರ್ವಾನುಮತದಿಂದ ಆಯ್ಕೆಯಾದರು. ಖಜಾಂಚಿಯಾಗಿ ಕೆ.ರಾಜೀವನ್, ಕಾರ್ಯದರ್ಶಿಯಾಗಿ ನವೀನ ಬೆಂಬಳೂರು ಹಾಗೂ ಉಪಾಧ್ಯಕ್ಷರನ್ನಾಗಿ ಸುಮಂಗಳ ಅವರನ್ನು ಆಯ್ಕೆ ಮಾಡಲಾಯಿತು. ಸೋಮವಾರಪೇಟೆ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇದೇ ಸಂದರ್ಭ ತಾಲೂಕು ಆಹಾರ ಶಿರಸ್ತುದಾರರು ಹಾಗೂ ಆಹಾರ ನಿರೀಕ್ಷಕರ ಸಮ್ಮುಖದಲ್ಲಿ ‘ಅನ್ನಭಾಗ್ಯ’ ಯೋಜನೆಯ ಸಮರ್ಪಕ ವಿತರಣೆಯ ಕುರಿತು ಚರ್ಚಿಸಲಾಯಿತು.