ಕಡಂಗ, ಮಾ. ೨೩: ಅರಪಟ್ಟು ಗ್ರಾಮದಲ್ಲಿರುವ ಪುರಾತನ ದೇವಾಲಯವಾದ ಶ್ರೀ ಪಟ್ಟೋಟು ಉಮಾ ಮಹೇಶ್ವರ ದೇವರ ಪ್ರತಿಷ್ಠಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಉತ್ಸವದ ಅಂಗವಾಗಿ ಸಾಮೂಹಿಕ ರುದ್ರಾಭಿಷೇಕ ಹಾಗೂ ಮಹಾ ಪೂಜಾ ಕಾರ್ಯ ಕ್ರಮವನ್ನು ಅರ್ಚಕರಾದ ವಿದ್ಯಾಧರ್ ಭಟ್ ಹಾಗೂ ತಂಡ ನೆರವೇರಿತು. ದೇವಸ್ಥಾನ ಸಮಿತಿ ಅಧ್ಯಕ್ಷ ನೆರಪಂಡ ಚಿತ್ರ ಬೆಳ್ಯಪ್ಪ ಹಾಗೂ ಸಮಿತಿ ಸದಸ್ಯರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ವಿಧಿಗಳಲ್ಲಿ ಭಾಗವಹಿ ಸಿದ್ದರು. ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ನಂಬಿಯಪAಡ ದಿವಂಗತ ಪೂವಯ್ಯ ಅವರ ಜ್ಞಾಪಕಾರ್ಥವಾಗಿ ಅವರ ಮಕ್ಕಳು ನೀಡಿದರು.