ಸುಂಟಿಕೊಪ್ಪ, ಮಾ. ೨೪: ಕೆದಕಲ್ ಗ್ರಾಮ ಪಂಚಾಯಿತಿ ರಾಷ್ಟಿçÃಯ ಹೆದ್ದಾರಿ ೨೭೫ರ ಪ್ರಮುಖ ಕೇಂದ್ರವಾಗಿದೆ. ಸ್ವಚ್ಛ ಭಾರತ ಯೋಜನೆಗೆ ಕೇಂದ್ರ ಸರಕಾರ ಗ್ರಾ.ಪಂ.ಗೆ ಅನುದಾನ ಬಿಡುಗಡೆಗೊಳಿಸುತ್ತಿದೆ. ಆದರೆ ತ್ಯಾಜ್ಯ ರಾಶಿಗಟ್ಟಲೆ ರಸ್ತೆ ಬದಿಗೆ ತಂದು ಹಾಕುತ್ತಿದ್ದರೂ ಗ್ರಾ.ಪಂ. ಮೌನವಹಿಸಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ೭ನೇ ಮೈಲು ಬಾಳೆಕಾಡು ಕಾಫಿ ತೋಟದ ರಾಷ್ಟಿçÃಯ ಹೆದ್ದಾರಿ ಬಳಿ ಪ್ರವಾಸಿಗರು, ಗ್ರಾಮಸ್ಥರು ರಾತ್ರಿ, ಮುಂಜಾನೆಯ ವೇಳೆ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಬಾಟಲ್, ತಿಂಡಿ ತಿನಿಸುಗಳ ಪ್ಲಾಸ್ಟಿಕ್‌ಗಳನ್ನು ಇಲ್ಲಿ ತಂದು ಹಾಕುತ್ತಿದ್ದರೂ ಕೆದಕಲ್ ಗ್ರಾಮ ಪಂಚಾಯಿತಿಯವರು ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

ಇಲ್ಲಿ ಕಸ ಹಾಕದಂತೆ ಸೂಚನಾ ಫಲಕಗಳನ್ನು ಅಳವಡಿಸಲಿ ಎಂದು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ ಹಾಗೂ ಕಸ ಎಸೆಯುವವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.