ಮಡಿಕೇರಿ, ಮಾ. ೨೩: ತಾಲೂಕು ಬೆಟ್ಟಗೇರಿ ಗ್ರಾಮದ ಬಕ್ಕ ನೈಯ್ಯಣಿ ಕುಟುಂಬದ ಐನ್ ಮನೆಗೆ ನೂತನ ಸಂಪರ್ಕ ರಸ್ತೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೊಂಬಾರನ ಜಿ. ಬೋಪಯ್ಯ ಅವರು ಇಂದು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಅವುಗಳ ಪ್ರಯೋಜನ ಪಡೆದುಕೊಳ್ಳುವ ಬಗ್ಗೆ ತಿಳಿ ಹೇಳಿದರು.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ್ಯಾಲಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ತಳೂರು ಕಿಶೋರ್ ಕುಮಾರ್, ನೈಯ್ಯಣಿ ಕುಟುಂಬದ ಹಿರಿಯರಾದ ಪೊನ್ನಪ್ಪ, ಗ್ರಾ.ಪಂ. ಸದಸ್ಯರಾದ ಆಯ್ಯೆಗಡಿರ ಮುತ್ತಪ್ಪ, ಗೋಪಾಲ, ಮಾಜಿ ಅಧ್ಯಕ್ಷ ಕೀತಿಯಂಡ ಪ್ರತಾಪ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಅಭಿಯಂತರ ನೈಯ್ಯಣಿ ಹೇಮಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.