ಚೆಟ್ಟಳ್ಳಿ, ಮಾ. ೨೩: ಅಪಾಯಕಾರಿಯಾದ ರಸ್ತೆಗೆ ಗ್ರಾಮಸ್ಥರೆ ಸೂಚನಾ ಫಲಕ ಅಳವಡಿಸಿದ ಘಟನೆ ಒಂಟಿಯAಗಡಿಯಲ್ಲಿ ನಡೆದಿದೆ.
ಚೆಟ್ಟಳ್ಳಿ-ಕುಶಾಲನಗರ ಹಾಗೂ ಸಿದ್ದಾಪುರ ಮಾರ್ಗವನ್ನು ಸಂಪರ್ಕಿಸುವ ಮುಖ್ಯ ರಸ್ತೆಗೆ ಲೋಕೋಪಯೋಗಿ ಇಲಾಖೆ ಒಂಟಿಯAಗಡಿಯ ಹಳೆಯ ಸೇತುವೆ ಪಕ್ಕದಲ್ಲಿ ನೂತನ ಸೇತುವೆ ನಿರ್ಮಿಸಿತ್ತು. ಆದರೆ ಸೂಚನಾ ಫಲಕವಿಲ್ಲದೆ ವಾಹನ ಸವಾರರು ಪರದಾಡುವಂತಾಗಿತ್ತು. ಹಲವು ತಿಂಗಳುಗಳ ನಂತರ ಸೇತುವೆಯ ಪಕ್ಕದಲ್ಲಿ ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕ ಸೂಚನಾ ಫಲಕವನ್ನು ಅಳವಡಿಸಿದ ಪರಿಣಾಮ ವಾಹನ ಸವಾರರು ಗೊಂದಲದಿAದ ವಾಹನಗಳ ನಡುವೆ ಅಪಾಘಾತಕ್ಕೆ ಕಾರಣವಾಗಿತ್ತು.
ಕೆದಂಬಾಡಿ ಪುರುಷೋತ್ತಮ್, ಮೂಟೆ ಗೋಪಾಲ್ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಸೇರಿ ವಾಹನ ಸವಾರರಿಗೆ ಅನುಕೂಲವಾಗಲೆಂದು ಸೂಚನಾ ಫಲಕವನ್ನು ಅಳವಡಿಸಿದ್ದಾರೆ.