ಗೋಣಿಕೊಪ್ಪ ವರದಿ, ಮಾ. ೨೩: ವಿವೇಕಾನಂದ ಯೂತ್ ಮೂವ್‌ಮೆಂಟ್, ಕೊಡಗು ವನವಾಸಿ ಕಲ್ಯಾಣ, ಬಾಳೆಲೆ ಕೊಡಗು, ಗ್ರಾಮ ಪಂಚಾಯಿತಿ ವತಿಯಿಂದ ಬಾಳೆಲೆ ಹೋಬಳಿ ವ್ಯಾಪ್ತಿಯ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಬಾಳೆಲೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು.

೨೧ ಗಿರಿಜನ ಗರ್ಭಿಣಿ ಮಹಿಳೆಯರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ಬಾಳೆಲೆ ಗ್ರಾ.ಪಂ. ಅಧ್ಯಕ್ಷ ಪೊಡಮಾಡ ಸುಖೇಶ್ ಭೀಮಯ್ಯ ಮಾತನಾಡಿ, ಮುಂದಿನ ಪೀಳಿಗೆಗೆ ಅಧಾರ ಸ್ತಂಭಗಳಾದ ಗರ್ಭಿಣಿ ಸ್ತಿçÃಯರು ಉತ್ತಮ ಆರೋಗ್ಯಕರ ಪದ್ಧತಿಯನ್ನು ರೂಢಿಸಿಕೊಂಡು ಮಗುವಿನ ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.

ಗ್ರಾ.ಪA. ಸದಸ್ಯೆ ಮುಕ್ಕಾಟಿರ ಜಾನಕಿ, ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ರಾಜೇಶ್, ಮಹಿಳಾ ಆರೋಗ್ಯ ಪರಿವೀಕ್ಷಕಿ ಕಾವೇರಮ್ಮ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶೋಕ್ ಕುಮಾರ್, ಪಿಡಿಓ ಸಂತೋಷ್, ಸ್ವಾಮಿ ವಿವೇಕಾ ನಂದ ಯೂತ್ ಮೂವ್‌ಮೆಂಟ್ ಕಾರ್ಯಕ್ರಮ ವ್ಯವಸ್ಥಾಪಕಿ ಕುಸುಮ, ಮೇಲ್ವಿಚಾರಕ ಶ್ರತೇಶ್ ಇದ್ದರು.