ಮಡಿಕೇರಿ, ಮಾ. ೨೧: ನಗರದ ಶ್ರೀ ರಾಮೋತ್ಸವ ಸಮಿತಿ ವತಿಯಿಂದ ಶ್ರೀ ರಾಮೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ತಾ. ೨೨ ರಿಂದ ಪ್ರತಿದಿನ ಸಂಜೆ ೬.೩೦ ರಿಂದ ೮.೩೦ ರವರೆಗೆ ಆಂಜನೇಯ ದೇವಾಲಯದ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ತಾ. ೨೨ ರಂದು ಬಾಳೆಲೆಯ ಅನ್ವಿತ್ ಕುಮಾರ್ ತಂಡದಿAದ ಗಾನಸುದೆ, ತಾ. ೨೩ ರಂದು ಮೈಸೂರಿನ ಹರಿಕಥಾ ವಿದುಷಿ ನಾಗಲಕ್ಷಿö್ಮ ಅವರಿಂದ ಹರಿಕಥೆ ನಡೆಯಲಿದೆ. ತಾ. ೨೪ ರಂದು ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿAದ ಭಜನೆ, ತಾ. ೨೫ ರಂದು ಬೆಂಗಳೂರಿನ ವಿಶ್ವಾಸ್ ತಂಡದಿAದ ಕೊಳಲು ವಾದನ, ತಾ. ೨೬ ರಂದು ಮಡಿಕೇರಿಯ ಸ್ಫೂರ್ತಿ ಮಹಿಳಾ ತಂಡದಿAದ ಗೋಷ್ಠಿ ಗಾಯನ, ತಾ. ೨೭ ರಂದು ಮಡಿಕೇರಿಯ ಶುÈತಿಲಯ ತಂಡದಿAದ ವೃಂದ ಗಾಯನ, ತಾ. ೨೮ ರಂದು ಮಡಿಕೇರಿಯ ಸಂಗೀತ ವಿದುಷಿ ಮೇಘಾ ಭಟ್ ಅವರಿಂದ ಶಾಸ್ತಿçÃಯ ಸಂಗೀತ, ತಾ. ೨೯ ರಂದು ಕೆದಿಲ ಯಕ್ಷಗಾನ ಕಲಾವರ್ದಿನಿ ಸಭಾದಿಂದ ಯಕ್ಷಗಾನ ತಾಳ ಮದ್ದಳೆ, ತಾ. ೩೦ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಶಿವಶಕ್ತಿ ಮಹಿಳಾ ತಂಡದಿAದ ಸ್ತೋತ್ರ ಪಠಣ, ರಾಮನವಮಿ ವಿಶೇಷ ಪೂಜೆ, ಸಂಜೆ ಚೆನ್ನೆöÊನ ಸಂಗೀತ ವಿದುಷಿ ಚೈತ್ರ ಸಾಯಿರಾಂ ಅವರಿಂದ ಕರ್ನಾಟಕ ಅವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ, ತಾ. ೩೧ ರಂದು ಬೆಳಿಗ್ಗೆ ೧೦ ಗಂಟೆಗೆ ಮಡಿಕೇರಿಯ ಮಾತೃ ಮಂಡಳಿಯಿAದ ಸ್ತೋತ್ರ ಪಠಣ, ಸಂಜೆ ಕುಶಾಲನಗರದ ಸತೀಶ್ ಬಳಗದಿಂದ ವಾದ್ಯ ಸಂಗೀತ ನಡೆಯಲಿದೆ.