ಕೂಡಿಗೆ, ಮಾ. ೨೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಎಡ ಭಾಗದ ಮುಖ್ಯ ನಾಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡAತೆ ಈಗಾಗಲೇ ಕಾವೇರಿ ನೀರಾವರಿ ನಿಗಮದ ಮೂಲಕ ರೂ. ೫೦ ಕೋಟಿ ಹಣ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಯ ಸಮೀಪದಿಂದ ೭ನೇ ತೂಬಿನವರೆಗೆ ದುರಸ್ತಿಗೆ ಸಂಬAಧಿಸಿದAತೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ನವೀಕರಣ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ.

ಕಳೆದ ೪೦ ವರ್ಷಗಳಷ್ಟು ಹಳೆಯದಾದ ಮುಖ್ಯನಾಲೆಯ ಕಾಲುವೆಯು ಇದಾಗಿದ್ದು, ಮುಖ್ಯ ನಾಲೆಯ ಕಾಲುವೆಗಳು ಹಲವಾರು ವರ್ಷಗಳಿಂದ ನೀರಿನ ಹರಿಯುವಿಕೆ ಮತ್ತು ಅತಿಯಾದ ಮಳೆಯಿಂದಾಗಿ ನಾಲೆಯ ನಿಗದಿತ ವಿನ್ಯಾಸ ಕಳೆದುಕೊಂಡಿರುವ ನಾಲೆಯ ಲೈನಿಂಗ್ ಹಾಗೂ ರಿವೆಟ್‌ಮೆಂಟ್ ಶಿಥಿಲಗೊಂಡಿದ್ದು, ಅಲ್ಲದೆ ನಾಲೆಯ ಹೊಳು ತುಂಬಿರುವ ಹಿನ್ನೆಲೆಯಲ್ಲಿ ಮತ್ತು ಮುಖ್ಯನಾಲೆಯಲ್ಲಿ ಗಿಡಗಂಟಿ ಗಳು ಬೆಳೆದಿರುವ ಕಾರಣದಿಂದಾಗಿ ನೀರು ಹರಿಯುವಿಕೆಯ ಸಾಮರ್ಥ್ಯ ಕಡಿಮೆಯಾಗಿದೆ. ಅಲ್ಲದೆ ಕೊನೆಯ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಒದಗಿಸುವ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದಿನಿAದಲೂ ಹುದುಗೂರು ಭಾಗದ ರೈತರ ಒತ್ತಾಯವಾಗಿತ್ತು. ಅದರಂತೆಯೇ ಹಾರಂಗಿಗೆ ಭೇಟಿ ನೀಡಿದ ನೀರಾವರಿ ಸಚಿವರ ಗಮನಕ್ಕೆ ತಂದು ಮನವಿಯನ್ನು ಗ್ರಾಮಸ್ಥರು ಮತ್ತು ವಿವಿಧ ರೈತ ಸಂಘಟನೆಯ ಪರವಾಗಿ ಸಲ್ಲಿಸಲಾಗಿತ್ತು.

ಅದರಂತೆಯೇ ಕಳೆದ ತಿಂಗಳ ಬಜೆಟ್‌ನ ಸಂದರ್ಭದಲ್ಲಿ ಹಾರಂಗಿಯ ಮುಖ್ಯನಾಲೆ ನವೀಕರಣಕ್ಕೆ ಸಂಬAಧಿಸಿದAತೆ ಅಧಿವೇಶನದಲ್ಲಿ ಚರ್ಚೆಗಳನ್ನು ಮಾಡಲಾಗಿತ್ತು. ಅದರನ್ವಯ ಆಡಳಿತಾತ್ಮಕವಾಗಿ ಅನುಮೋದನೆ ದೊರೆತು, ರೂ. ೫೦ ಕೋಟಿ ಹಣ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯು ನಡೆದಿದೆ.

ಇದಕ್ಕೆ ಸಂಬAಧಿಸಿದAತೆ ಹಾರಂಗಿಯ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಅವರ ಅಭಿಪ್ರಾಯವನ್ನು ಬಯಸಿದಾಗ ಅಧಿವೇಶನದಲ್ಲಿ ಚರ್ಚೆಗೊಂಡAತೆ ರಾಜ್ಯ ಕಾವೇರಿ ನೀರಾವರಿ ನಿಗಮದ ಮೂಲಕ ಇಲಾಖೆಯ ಕ್ರಿಯಾಯೋಜನೆ ಅನುಗುಣವಾಗಿ ಆಡಳಿತಾತ್ಮಕವಾಗಿ ಅನುಮೋದನೆ ದೊರೆತ ಹಿನ್ನೆಲೆಯಲ್ಲಿ ಇಲಾಖೆಯ ನಿಯಮಾನುಸಾರವಾಗಿ ಟೆಂಡರ್ ಪ್ರಕ್ರಿಯೆಯು ನಡೆಯುತ್ತಿದ್ದು, ಅದರಂತೆಯೇ ಹಾರಂಗಿಯ ಮುಖ್ಯ ನಾಲೆ ಒಂದರಿAದ ೭ನೇ ತೂಬುನ ವರೆಗೆ ಆಧುನಿಕ ತಂತ್ರಜ್ಞಾನದ ಯೋಜನೆಯ ಅಡಿಯಲ್ಲಿ ಮುಖ್ಯ ನಾಲೆಯ ಕಾಮಗಾರಿಯು ನಡೆಯಲಿದೆ. ಇದರಿಂದಾಗಿ ಅಣೆಕಟ್ಟೆಯ ಸಮೀಪದ ಗ್ರಾಮಗಳು ಶೀತಮಯವಾಗುವುದನ್ನು ತಪ್ಪಿಸಲು ಸಹಕಾರ, ಅಲ್ಲದೇ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಗಳಾದ ಮೈಸೂರು, ಹಾಸನ ಜಿಲ್ಲೆಯ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಾಯಕ್ಕೆ ನೀರು ಒದಗಿಸಲು ಅನುಕೂಲವಾಗುವುದು. ಅದರಿಂದಾಗಿ ಬಹು ದಿನಗಳ ರೈತರ ಬೇಡಿಕೆಗೆ ಸರಕಾರ ಸ್ಪಂದಿಸಿದೆ ಎಂದರು. - ಕೆ.ಕೆ. ನಾಗರಾಜಶೆಟ್ಟಿ