ಶ್ರೀಮಂಗಲ, ಮಾ. ೨೧: ಕುಮಟೂರು ಗ್ರಾಮದ ಕೆ. ಬಾಡಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ೧೫ ಬೆಂಚು, ೫ ಕುರ್ಚಿ ಮತ್ತು ಡೆಸ್ಕ್ಗಳನ್ನು ಹೈಕೋರ್ಟ್ ಹಿರಿಯ ವಕೀಲ ಮತ್ತು ರಾಜ್ಯ ಸರಕಾರದ ಮಾಜಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ನೀಡಿದರು.

ಅಂದಾಜು ರೂ. ೧ ಲಕ್ಷ ಮೌಲ್ಯದ ಈ ಪೀಠೋಪಕರಣಗಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚೆಲ್ಲ, ಸದಸ್ಯರಾದ ಕೋಟ್ರಂಗಡ ಅರುಣ, ಗ್ರಾ.ಪಂ. ಸದಸ್ಯ ಮಾದೀರ ಸುಧಿ ಪೊನ್ನಪ್ಪ, ಮುಖ್ಯ ಶಿಕ್ಷಕರಾದ ಸಂತೋಷ್ ಕುಮಾರ್ ಲೋಬೊ ಅವರ ಮೂಲಕ ಶಾಲೆಗೆ ಪೊನ್ನಣ್ಣ ಅವರು ನೀಡಿದರು. ಶಾಲೆಗೆ ನೆರವು ನೀಡಿದ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕಿಯರಾದ ಅಂಜಲಿ, ರೀನಾ, ಶಾಲಾಭಿವೃದ್ಧಿ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.