ಚೆಟ್ಟಳ್ಳಿ, ಮಾ. ೨೧: ದುರಸ್ತಿ ಕಾರ್ಯ ನಡೆಯುತ್ತಿರುವ ಚೆಟ್ಟಳ್ಳಿ- ಕತ್ತಲೆಕಾಡು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಬರೆಗೆ ಡಿಕ್ಕಿಯಾದ ಘಟನೆ ನಡೆದಿದ್ದು, ಪ್ರವಾಸಿಗರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ಮಡಿಕೇರಿಯಿಂದ ಚೆಟ್ಟಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಪ್ರವಾಸಿಗರ ಬಾಡಿಗೆ ಕಾರು ಅಬ್ಯಾಲದಲ್ಲಿ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ಬರೆಗೆ ಡಿಕ್ಕಿ ಹೊಡೆದು, ಕಾರಿನ ಮುಂದಿನ ಚಕ್ರ ಜಖಂಗೊAಡಿದ್ದು, ಏರ್ಬ್ಯಾಗ್ ತೆರೆದುಕೊಂಡ ಪರಿಣಾಮ ಚಾಲಕ ಪಾರಾಗಿದ್ದಾನೆ. ಕಾರಿನ ಮುಂಭಾಗ ಜಖಂಗೊAಡಿದೆ.