ನಾಪೋಕ್ಲು, ಮಾ. ೨೧: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿಯಾಗಿ ಎ.ಎ. ಮೊಹಮ್ಮದ್ ಹಾಜಿ ನೇಮಕಗೊಂಡಿದ್ದಾರೆ. ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಕೆ. ಜಬ್ಬಾರ್ ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್ ಅವರ ಆದೇಶದ ಮೇರೆಗೆ ಆದೇಶ ಪತ್ರವನ್ನು ಮಹಮ್ಮದ್ ಅವರಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಕೆ.ಎ. ಯಾಕೂಬ್, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಮೊಯಿದು ಎಂ.ಎ., ಕೊಡಗು ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಹನೀಫ್, ಅಶ್ರಫ್ ಕೆ.ಎಂ ಎಮ್ಮೆಮಾಡು ಇನ್ನಿತರರು ಉಪಸ್ಥಿತರಿದ್ದರು.