ಕೂಡಿಗೆ, ಮಾ. ೨೧ : ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಮುಂದೂಡಲ್ಪಟ್ಟಿದೆ. ಅಧ್ಯಕ್ಷೆ ಮಂಗಳಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ಆರಂಭಗೊಳ್ಳುತ್ತಿದ್ದAತೆ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್ ಸೇರಿದಂತೆ ಅನೇಕ ಸದಸ್ಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ಮಾಡಿದರೂ ಕೂಡ ಅಧ್ಯಕ್ಷರು ಕಾಮಗಾರಿ ನಡೆದ ಬಿಲ್‌ಗಳಿಗೆ ಸಹಿ ಮಾಡಿದೆ ಇರುವುದರಿಂದ ಸಭೆಯನ್ನು ಮುಂದೂಡುವAತೆ ಒತ್ತಾಯಿಸಿದರು.

ಕಾಮಗಾರಿಗಳ ಬಿಲ್‌ಗೆ ಸಹಿ ಹಾಕದ ವಿಚಾರಕ್ಕೆ ಸಂಬAಧಿಸಿದAತೆ ಕಳೆದ ನಾಲ್ಕು ತಿಂಗಳುಗಳಿAದ ಮಾಸಿಕ ಸಭೆ ನಡೆಯದೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅಲ್ಲದೆ ವಾರ್ಷಿಕ ಬಜೆಟ್ ಮಂಡನೆ ಆಗಿಲ್ಲ. ಯಾವುದೇ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡುವAತೆ ಅರುಣ್‌ರಾವ್, ಎಸ್.ಎನ್. ಅನಂತ್, ಜಯಶ್ರೀ, ವಾಣಿ, ಟಿ.ಪಿ. ಹಮೀದ್, ಶಿವಕುಮಾರ್, ಹೆಚ್.ಎಸ್. ರವಿ, ಕೆ.ಟಿ. ಗಿರೀಶ್, ಪಲ್ಲವಿ, ಲಕ್ಷಿö್ಮ ಸೇರಿದಂತೆ ೧೧ ಸದಸ್ಯರು ಸಭೆಯಲ್ಲಿ ಒತ್ತಾಯ ಮಾಡಿದರು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಇಓ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯುವಂತೆ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.