ನಾಪೋಕ್ಲು, ಮಾ. ೨೧: ಇಲ್ಲಿಗೆ ಸಮೀಪದ ಹಳೆತಾಲೂಕಿನ ನಾಡು ಭಗವತಿ ದೇವರ ವಾರ್ಷಿಕ ಉತ್ಸವ ಭಾನುವಾರ ವಿಜೃಂಭಣೆಯಿAದ ಜರುಗಿತು. ತಾ. ೧೭ ರಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದುಕೊಂಡು ಬಂದ ಶ್ರೀ ಭಗವತಿ ದೇವರ ಹಬ್ಬವು ಪಟ್ಟಣಿ ಆಚರಣೆಯೊಂದಿಗೆ ಸಂಪನ್ನಗೊAಡಿತು. ಆರಂಭದಲ್ಲಿ ಭಂಡಾರವನ್ನು ದೇವಾಲಯಕ್ಕೆ ತರಲಾಯಿತು. ನಂತರ ಅಂದಿಬೊಳಕು, ರಾತ್ರಿ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಿತು. ದೇವರ ಊರ ಪ್ರದಕ್ಷಿಣೆ, ಎತ್ತುಪೋರಾಟ, ಪಟ್ಟಣಿ ಹಬ್ಬ ವಿಶೇಷ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನದಾನ ಕಾರ್ಯಕ್ರಮ ಜರುಗಿದ ಬಳಿಕ ಗ್ರಾಮಸ್ಥರಿಂದ ಬೋಳಕಾಟ್, ದೇವರ ನೃತ್ಯ ಬಲಿ ಸಾಂಗವಾಗಿ ನೆರವೇರಿತು.

ಉತ್ಸವದ ಧಾರ್ಮಿಕ ಪೂಜಾ ವಿಧಿ ವಿಧಾನವನ್ನು ಗಿರೀಶ್ ತಂತ್ರಿ ಪೇರೂರು, ದೇವಾಲಯದ ಮುಖ್ಯ ಅರ್ಚಕ ಹರೀಶ್ ಕೇಕುಣ್ಣಾಯ, ಹಾಗೂ ನೃತ್ಯ ಬಲಿಯನ್ನು ಜಯಚಂದ್ರ ನೆರವೇರಿಸಿಕೊಟ್ಟರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಶಿಕ್ಷಕರು ಆದ ಕುಲ್ಲೇಟಿರ ಗುರುವಪ್ಪ, ಕಾರ್ಯದರ್ಶಿ ಕಂಗಾAಡ ಜಾಲಿ ಪೂವಪ್ಪ. ಆಡಳಿತ ಮಂಡಳಿ ನಿರ್ದೇಶಕರು, ತಕ್ಕ ಮುಖ್ಯಸ್ಥರು ಹಾಗೂ ಊರು ಪರ ಊರಿನ ಭಕ್ತಾದಿಗರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿವಿಧ ಸೇವೆಗಳನ್ನು ನೆರವೇರಿಸಿಕೊಂಡರು.