ಮಡಿಕೇರಿ, ಮಾ.೨೧: ಸಾಮಾಜಿಕ ಕಳಕಳಿ, ಸಂಸ್ಕೃತಿ- ಸಾಹಿತ್ಯದ ಬೆಳವಣಿಗೆಯ ಕಾಯಕದಲ್ಲಿ ತೊಡಗಿಸಿಕೊಂಡಿರುವ ಕೊಡವ ಮಕ್ಕಡ ಕೂಟ ಹೊರತಂದಿರುವ, ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಹಾಗೂ ಸಾಹಿತಿಯೂ ಆಗಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಬರೆದಿರುವ ಸಾಮಾಜಿಕ ಕಾದಂಬರಿ ‘ಹೊಂಬೆಳಕು’ ಪುಸ್ತಕವನ್ನು ಹಿರಿಯ ತ್ರಿಭಾಷಾ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಬಿಡುಗಡೆ ಗೊಳಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಸರಳ ಕಾರ್ಯ ಕ್ರಮದಲ್ಲಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಶೋಭಾ ಸುಬ್ಬಯ್ಯ ಅವರು; ಇತ್ತೀಚೆಗೆ ಹೊಸ ಹೊಸ ಪುಸ್ತಕಗಳು ಪ್ರಟಗೊಳ್ಳುತ್ತಿರು ವದು ಸಂತೋಷದ ವಿಚಾರವಾಗಿದೆ, ಹೊಂಬೆಳಕು ಪುಸ್ತಕದಲ್ಲಿ ಸಮಾಜದಲ್ಲಿ ಏನು ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಪ್ರಕಾಶ್ ಬಿಂಬಿಸಿದ್ದಾರೆ. ಇಂತಹ ವಿಭಿನ್ನ ಚಿಂತನೆಗಳ ಪುಸ್ತಕಗಳು ಇನ್ನಷ್ಟು ಬರಲಿ, ಬರವಣಿಗೆ ಮುಂದುವರಿಯಲಿ ಎಂದು ಆಶಿಸಿದರು.

ಕಾದಂಬರಿ ರಚನೆಕಾರ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ; ಪುಸ್ತಕ ಹೊರತರಲು ಕೊಡವ ಮಕ್ಕಡ ಕೂಟದವರಿಂದ ಹಿಡಿದು ಹಲವರು ಸಹಕಾರ ಮಾಡಿದ್ದಾರೆ. ಐಚಂಡ ರಶ್ಮಿ ಮೇದಪ್ಪ ಕರಡು ತಿದ್ದುಪಡಿ ಮಾಡಿದರೆ, ನ್ಯೂಸ್ ಡೆಸ್ಕ್ನ ಎಸ್.ಕೆ.ಲಕ್ಷಿö್ಮÃಶ್ ಮುಖಪುಟ ರಚನೆ ಮಾಡಿದ್ದಾರೆ. ಇನ್ನೂ ಹಲವರು ಸಹಕರಿಸಿದ್ದಾರೆ ಎಂದು ಹೇಳಿದರು. ಇಂದಿನ ಮೊಬೈಲ್ ಪ್ರಪಂಚದಲ್ಲಿ ಕಾದಂಬರಿಗಳು ಬಾಂಧವ್ಯ ವೃದ್ಧಿಸುವ ಕೆಲಸ ಮಾಡುತ್ತಿದ್ದು, ಅಭಿರುಚಿ ಇರುವವರು ಮುಂದೆ ಬರಬೇಕೆಂದು ಹೇಳಿದರು.

ಕೊಡವ ಮಕ್ಕಡ ಕುಟದ ಕಾರ್ಯದರ್ಶಿ ಪುತ್ತರೀರ ಕಾಳಯ್ಯ ಮಾತನಾಡಿ; ೧೨ವರ್ಷದ ಹಿಂದೆ ಸ್ಥಾಪನೆಗೊಂಡ ಕೂಟ ಹಲವಷ್ಟು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿದೆ. ವಿವಿಧ ಭಾಷೆಗಳಲ್ಲಿ ಸುಮಾರು ೬೨ ಪುಸ್ತಕಗಳನ್ನು ಹೊರತಂದಿದ್ದು, ಇದು ೬೩ನೇ ಪುಸ್ತಕವಾಗಿದೆ. ಪ್ರಕಟವಾದ ಪುಸ್ತಕಗಳ ಪೈಕಿ ಹಲವಾರು ಪುಸ್ತಕಗಳ ಕಥೆಗಳು ಸಿನಿಮಾ, ನಾಟಕಗಳಾಗಿ ನಿರ್ಮಾಣ ಗೊಂಡು ದಾಖಲೆ ಸೃಷ್ಟಿಸಿವೆ. ಇನ್ನು ಹಲವಷ್ಟು ಪುಸ್ತಕಗಳು ಪ್ರಕಟಗೊಳ್ಳಲು ತಯಾರಾಗಿವೆ. ಈ ಒಂದು ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಬರಹಗಾರ್ತಿ ಐಚಂಡ ರಶ್ಮಿ ಮಾತನಾಡಿ; ಹೊಂಬೆಳಕು ಪುಸ್ತಕದಲ್ಲಿ ಸಮಾಜದಲ್ಲಿನ ಘಟನೆಗಳು ಬರಹಗಾರರ ಕಲ್ಪನಾಶಕ್ತಿಯಿಂದ ಉತ್ತಮವಾಗಿ ಮೂಡಿ ಬಂದಿದೆ. ಇಂತಹ ಪುಸ್ತಕಗಳು ಇನ್ನಷ್ಟು ಹೊರಬರಲಿ ಎಂದು ಆಶಿಸಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ; ಕೂಟ ಪ್ರಕಟಿಸಿರುವ ೬೨ ಪುಸ್ತಕಗಳ ಪೈಕಿ ಐದು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಲಭಿಸಿದೆ. ಮೂರು ಪುಸ್ತಕಗಳು ಸಿನಿಮವಾಗಿ ತೆರೆಕಂಡಿವೆ. ಇದರೊಂದಿಗೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರ, ಕೊಡಗಿನ ಹಾಗೂ ಕೊಡವ ಆಚಾರ- ವಿಚಾರಗಳಿಗೆ ಸಂಬAಧಿಸಿದ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಕೂಟದ ಖಜಾಂಚಿ ಅಮ್ಮಾಟಂಡ ಮೇದಪ್ಪ ಇದ್ದರು.