ಮಡಿಕೇರಿ, ಮಾ. ೨೦: ಮುಂದಿನ ಸಾಲಿಗೆ ಒಟ್ಟು ೭೩,೧೩,೪೮,೭೯೨ ರೂಪಾಯಿ ಗಾತ್ರದ ಆಯವ್ಯಯವನ್ನು ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಂಡಿಸಿ ಅನುಮೋದನೆ ಪಡೆದುಕೊಂಡರು.
ನಗರಸಭೆ ಸಭಾಂಗಣದಲ್ಲಿ ನಡೆದ ಆಯವ್ಯಯ ಅಂದಾಜುಪಟ್ಟಿಯನ್ನು ಅಧ್ಯಕ್ಷೆ ಸಭೆಯ ಮುಂದಿಟ್ಟು ಅಭಿವೃದ್ಧಿ ಕಾರ್ಯದ ಬಗ್ಗೆ ವಿವರಿಸಿದರು.
೨೦೨೩-೨೪ನೇ ಸಾಲಿನಲ್ಲಿ ಆರಂಭ ಶಿಲ್ಕು ೧೨,೦೯,೮೯,೬೩೦ ರೂಪಾಯಿ ಹೊಂದಿದ್ದು, ರೂ. ೬೧,೦೩,೫೯,೧೬೨ ಸ್ವೀಕೃತಿಯೊಂದಿಗೆ ರೂ. ೭೩,೧೩,೪೮,೭೯೨ ನಿರೀಕ್ಷಿತ ಆಯವ್ಯಯವನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ ರೂ. ೬೬,೮೮,೦೮,೦೦೦ ವೆಚ್ಚವಾಗಲಿದ್ದು, ೬,೨೫,೪೦,೭೯೨ ರೂಪಾಯಿ ಉಳಿಕೆಯಾಗಲಿದೆ ಎಂದು ಮಾಹಿತಿ ಒದಗಿಸಿದರು.