*ಗೋಣಿಕೊಪ್ಪಲು, ಮಾ. ೧೯: ಸಮೀಪದ ತಿತಿಮತಿ ಕರಡಿಕೊಪ್ಪದಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿರುವ ಶ್ರೀ ಮುತ್ತಪ್ಪ ದೇವರ ಉತ್ಸವ ತಾ. ೨೪ ರಿಂದ ೨೬ ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ತಾ. ೨೪ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಮತ್ತು ಪುಟ್ಟ ಮಕ್ಕಳ ದಿವ್ಯ ಭವಿಷ್ಯಕ್ಕಾಗಿ ಮೌನ ಜ್ಞಾನವನ್ನು ಏರ್ಪಡಿಸಲಾಗಿದೆ. ಸಂಜೆ ೪ ಗಂಟೆಗೆ ಬಾಳುಮನೆ ಗಣಪತಿ ದೇವಸ್ಥಾನದಿಂದ ಕಲಶ ತರುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ತಾ. ೨೫ ಮತ್ತು ೨೬ ರಂದು ಮುತ್ತಪ್ಪನ್ ವೆಳ್ಳಾಟ, ಶ್ರೀ ತಿರುವಪ್ಪನ್, ಶ್ರೀ ಕಾರಣವರ್, ಶ್ರೀ ಪೋದಿ, ಶ್ರೀ ವಸೂರಿಮಾಲಾ, ಶ್ರೀ ಗುಳಿಗನ್, ಶ್ರೀ ಕಂಡಾಕರ್ಣನ್, ಶ್ರೀ ವಿಷ್ಣುಮೂರ್ತಿ, ಶ್ರೀ ಕುಟ್ಟಿಚಾತನ್ ಮೊದಲಾದ ತೆರೆಗಳು ಜರುಗಲಿದೆ. ಉತ್ಸವದ ದಿನಗಳಲ್ಲಿ ಎಲ್ಲಾ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ತಿತಿಮತಿ-ಕರಡಿಕೊಪ್ಪ ಶ್ರೀ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷ ಬಿ.ಪಿ. ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.