ವೀರಾಜಪೇಟೆ, ಮಾ. ೧೮: ವೀರಾಜಪೇಟೆ ಪುರಸಭೆಯ ೨೦೨೩-೨೪ನೇ ಸಾಲಿನ ಎರಡನೇ ವಾರ್ಷಿಕ ಮೀನು ಮಳಿಗೆ ಹರಾಜಿನಲ್ಲಿ ರೂ. ೩,೧೭,೨೦೦ ಆದಾಯ ಲಭಿಸಿದೆ. ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಗೈರಿನಲ್ಲಿ ಮುಖ್ಯಾಧಿಕಾರಿ ಚಂದ್ರಕುಮಾರ್ ನೇತೃತ್ವದಲ್ಲಿ ವಾರ್ಷಿಕ ಹರಾಜು ನಡೆಯಿತು. ಸಮುದ್ರ ಮೀನುಗಳ ಮಳಿಗೆ ಹರಾಜಿನಲ್ಲಿ ಮಳಿಗೆ ಸಂಖ್ಯೆ ೩ ರಲ್ಲಿ ರೂ. ೬,೭೦೦, ಮಳಿಗೆ ಸಂಖ್ಯೆ ೪ರಲ್ಲಿ ರೂ. ೫,೫೦೦, ಮಳಿಗೆ ೫ ರಲ್ಲಿ ರೂ. ೧,೩೦,೦೦೦, ಮಳಿಗೆ ಸಂಖ್ಯೆ ೬ರಲ್ಲಿ ರೂ. ೫,೦೦೦, ಮಳಿಗೆ ಸಂಖ್ಯೆ ೭ರಲ್ಲಿ ರೂ. ೧,೭೦,೦೦೦ ಆದಾಯ ಗಳಿಸಿದೆ. ಒಟ್ಟು ರೂ. ೩,೧೭,೨೦೦ ಆದಾಯ ಗಳಿಸಿದೆ. ಒಟ್ಟಾರೆಯಾಗಿ ೨೦೨೩-೨೪ನೇ ಸಾಲಿನ ಎರಡು ಹಂತದ ವಿವಿಧ ಮಳಿಗೆಗಳ ವಾರ್ಷಿಕ ಹರಾಜಿನಲ್ಲಿ ರೂ. ೪,೨೭.೦೦೦ ಲಾಭ ಗಳಿಸಿದೆ. ಹರಾಜು ಪ್ರಕ್ರಿಯೆಯಲ್ಲಿ ಬಿಡ್‌ದಾರರು, ಪುರಸಭೆ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.