ಮಡಿಕೇರಿ, ಮಾ. ೧೮: ಮಡಿಕೇರಿ ತಾಲೂಕು ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕ ಉತ್ಸವವು ತಾ. ೨೨ ರಿಂದ ತಾ. ೨೭ ರವರೆಗೆ ನಡೆಯಲಿದ್ದು ಅದರ ಅಂಗವಾಗಿ ತಾ. ೨೨ ರಂದು ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ಗಣಪತಿ ಹೋಮ, ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಸಂಜೆ ೬.೩೦ಕ್ಕೆ ತಕ್ಕರ ಮನೆಯಿಂದ ಭಂಡಾರ ತರುವುದು, ಅಂದಿಬೆಳಕು, ದೇವರ ಬಲಿ ಬರುವುದು, ಪ್ರಸಾದ ವಿತರಣೆ. ತಾ. ೨೩ ರ ಬೆಳಿಗ್ಗೆ ಆರು ಗಂಟೆಗೆ ಇರು ಬೆಳಕು ದೇವರು ಬಲಿ ಬರುವುದು ಮಧ್ಯಾಹ್ನ ಮಹಾಪೂಜೆ, ಸಂಜೆ ಆರು ಗಂಟೆಗೆ ಬೆಳಕು ದೇವರ ಬಲಿ ಅಂದಿಬೆಳಕು ಪ್ರಸಾದ ವಿತರಣೆ, ತಾ. ೨೪ ರಂದು ಬೆಳಿಗ್ಗೆ ೬ ಗಂಟೆಗೆ ದೇವರು ಬಲಿ ಬರುವುದು, ಮಧ್ಯಾಹ್ನ ಮಹಾಪೂಜೆ, ಸಂಜೆ ಆರು ಗಂಟೆಗೆ ಬೆಳಕು, ದೇವರು ಬಲಿ ಬರುವುದು.

ತಾ. ೨೫ ರ ಬೆಳಿಗ್ಗೆ ಆರು ಗಂಟೆಗೆ ಇರು ಬೆಳಕು ಹತ್ತು ಗಂಟೆಗೆ ಎತ್ತು ಪೋರಾಟ ತೆಂಗಿನ ಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಮುರಿವುದು, ತೆಂಗಿನಕಾಯಿ ಪೋರು ಮಹಾಪೂಜೆ, ಅನ್ನ ಸಂತರ್ಪಣೆ ನಂತರ ೨ ಗಂಟೆಗೆ ದೇವರು ಬಲಿ ಬರುವುದು ನಡೆ ಭಂಡಾರ ಒಪ್ಪಿಸು ವುದು ಸಂಜೆ ೫.೩೦ಕ್ಕೆ ಪರದೇವರಿಗೆ ಬೇಟೆ. ತಾ. ೨೬ರ ಸಂಜೆ ನಾಲ್ಕು ಗಂಟೆಗೆ ಬೆಳಕು, ದೇವರು ಜಳಕ್ಕೆ ತೆರಳುವುದು ನಂತರ ದೇವರ ನೃತ್ಯ ಬಲಿ, ಅನ್ನಸಂತರ್ಪಣೆ, ತಾ. ೨೭ರ ಬೆಳಿಗ್ಗೆ ಹತ್ತು ಗಂಟೆಗೆ ಮಹಾಸಭೆ, ನಂತರ ಅನ್ನಸಂತರ್ಪಣೆ ಸಂಜೆ ಭಂಡಾರ ಇಡುವುದು. ಈ ವರ್ಷ ಪರದೇವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಆಗದೇ ಇರುವುದರಿಂದ ಪರದೇವರ ತೆರೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.