ಶ್ರೀಮಂಗಲ, ಮಾ. ೧೮: ಬಿರುನಾಣಿ- ಹುದಿಕೇರಿ ನಡುವೆ ಹೈಸೊಡ್ಲೂರು-ಪೊರಾಡು ಗ್ರಾಮದ ನಡುವಿನ ಕಕ್ಕಟ್ಟ್ ಪೊಳೆ ನದಿಯ ಸೇತುವೆ ಕೆಳಗೆ ತ್ಯಾಜ್ಯ ಸುರಿಯಲಾಗುತ್ತಿದ್ದು, ಕ್ರಮಕ್ಕೆ ನಾಗರಿಕರು ಆಗ್ರಹಿಸಿದ್ದಾರೆ.

ಮದುವೆ ಅಥವಾ ಇತರ ಸಮಾರಂಭದ ತ್ಯಾಜ್ಯ ನದಿಗೆ ಹಾಕಿ ನದಿ ನೀರು ಕಲುಷಿತವಾಗುವ ಅಪಾಯ ಉಂಟಾಗಿದೆ. ಚೀಲಗಳಲ್ಲಿ ತುಂಬಿ ತ್ಯಾಜ್ಯವನ್ನು ಸೇತುವೆ ಮೇಲಿಂದ ನದಿಗೆ ಸುರಿದಿದ್ದಾರೆ.

ತ್ಯಾಜ್ಯದಲ್ಲಿ ಮದ್ಯ ಬಾಟಲಿ, ಊಟದ ತಟ್ಟೆ, ನ್ಯಾಪ್ಕಿನ್, ಪ್ಲಾಸ್ಟಿಕ್ ಬ್ಯಾಗ್, ಅಲಂಕಾರಿಕ ಸಾಮಗ್ರಿ ಸೇರಿ ಇತರ ಸಾಮಗ್ರಿಗಳು ಸೇರಿವೆ. ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.