ಮಡಿಕೇರಿ, ಮಾ. ೧೮: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಕೊಡಗು ಜಿಲ್ಲಾ ಶಾಖೆಯ ಮಹಾಸಭೆ ಇತ್ತೀಚೆಗೆ ಕುಶಾಲನಗರ ಬಿ.ಜಿ.ಟಿ. ಆಡಿಟೋರಿಯಮ್‌ನಲ್ಲಿ ರಾಜ್ಯ ನಾಯಕ ಕೆ.ಎ. ಅಬ್ದುರಹ್ಮಾನ್ ರಝ್ವಿ ಕಲ್ಕಟ್ಟ ಅವರ ನೇತೃತ್ವದಲ್ಲಿ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಳ್ ಸಅದಿ ಉದ್ಘಾಟಿಸಿದರು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಕೊಳಕೇರಿ, ಪ್ರಧಾನ ಕಾರ್ಯದರ್ಶಿಯಾಗಿ ಆಹ್ಮದ್ ಮದನಿ ಗುಂಡಿಕೆರೆ, ಕೋಶಾಧಿಕಾರಿಯಾಗಿ ಅಬ್ದುಲ್ಲ ನೆಲ್ಲಿಹುದಿಕೇರಿ, ಉಪಾಧ್ಯಕ್ಷರಾಗಿ ಅಬೂಬಕ್ಕರ್ ಮದನಿ ಮಾಲ್ದಾರೆ, ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಜ್ ಸಖಾಫಿ ಕೊಡ್ಲಿಪೇಟೆ, (ಸಂಘಟನೆ) ಯಾಕೂಬ್ ಮಾಸ್ಟರ್ ಕೊಳಕೇರಿ (ಸಾಂತ್ವನ) ಅಝೀಝ್ ಮುಸ್ಲಿಯಾರ್ ಮಾಲ್ದಾರೆ (ಸಾಮಾಜಿಕ) ಅರಾಫತ್ ನಾಪೋಕ್ಲು (ಸಾಂಸ್ಕೃತಿಕ) ಹಸೈನಾರ್ ಮುಸ್ಲಿಯಾರ್ ಸುಂಟಿಕೊಪ್ಪ (ಇಸಾಬಾ) ಶರೀಫ್ ಹೊಸತೋಟ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಸಯ್ಯಿದ್ ಇಲ್ಯಾಸ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ನಾಯಿಬ್ ಖಾಝಿ ಶಾದುಲಿ ಫೈಝಿ ನೂತನ ಸಮಿತಿಯನ್ನು ಘೋಷಿಸಿದರು. ಹಿಂದಿನ ಕಾರ್ಯದರ್ಶಿ ಮೊಯ್ದಿನ್ ಪೊನ್ನತ್ತ್ಮೊಟ್ಟೆ ಸ್ವಾಗತಿಸಿ, ವಂದಿಸಿದರು.