ಸುಂಟಿಕೊಪ್ಪ, ಮಾ. ೧೮: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಡಂಗಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ೫೭ನೇ ವಾರ್ಷಿಕೋತ್ಸವದ ಅಂಗವಾಗಿ ತಾ. ೨೧ ಮತ್ತು ೨೨ ರಂದು ಭಗವತಿ ದೇವಸ್ಥಾನದ ಮಹಾಪೂಜೆ ನಡೆಯಲಿದೆ ಎಂದು ಶಾಂತಾ ರಾಮಕೃಷ್ಣ ತಿಳಿಸಿದ್ದಾರೆ.

ಕೊಡಂಗಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನದ ಮಹಾಪೂಜೆಯ ಅಂಗವಾಗಿ ತಾ. ೨೧ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೬.೩೦ ಗಂಟೆಗೆ ಗಣಪತಿ ಪೂಜೆ, ಸಂಜೆ ೬.೪೫ ಗಂಟೆಗೆ ಶ್ರೀಸುಬ್ರಮಣ್ಯ ಸ್ವಾಮಿ ದೇವರ ಪೂಜೆ, ಸಂಜೆ ೭ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ೭.೩೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ೭.೪೫ ಗಂಟೆಗೆ ಗುಳಿಗನ ಪೂಜೆ, ೮ ಗಂಟೆಗೆ ಶ್ರೀ ಭದ್ರಕಾಳಿ ದೇವಿಗೆ ಅರ್ಚನೆ ನೈವೇದ್ಯ ಪೂಜೆ, ರಾತ್ರಿ ೮.೩೦ ಗಂಟೆಗೆ ದೇವಿ ದರ್ಶನ, ೮.೪೫ ಗಂಟೆಗೆ ತಲಪುರಿ ಮೆರವಣಿಗೆ, ೯ ಗಂಟೆಗೆ ವಸೂರ ಮಾಲೆ ದೇವರ ವೆಳ್ಳಾಟಂ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೨೨ ರಂದು ಬೆಳಿಗ್ಗೆ ೯ ಗಂಟೆಗೆ ದೇವಿ ಹರಕೆ ೧೦ ರಿಂದ ೧೧ ರವರಗೆ ದೇವಿಗೆ ಅರ್ಪಣೆ ನಡೆಯಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.