*ಗೋಣಿಕೊಪ್ಪ, ಮಾ. ೧೮: ಸಮನ್ವಯ ಪೊಂಗಾಲ ಸಮಿತಿ ವತಿಯಿಂದ ಅತ್ತೂರು ದುರ್ಗಾ ಪರಮೇಶ್ವರಿ ದೇವಸ್ಥಾನ ಆವರಣದಲ್ಲಿ ಅಟಕುಲ್ ದೇವಿ ಪೊಂಗಾಲ ಆಚರಿಸಲಾಯಿತು.

ಆಚರಣೆಯಂತೆ ೧೩೦ ಮಹಿಳೆಯರ ತಂಡ ಅಕ್ಕಿ, ಬೇಳೆ ಪಾಯಸದ ಪ್ರಸಾದ ತಯಾರಿಸಿ ದೇವರಿಗೆ ಅರ್ಪಿಸಿದರು. ನಾಡಿಗೆ ಉತ್ತಮ ಬೆಳೆ ಕರುಣಿಸು ಎಂದು ಪ್ರಾರ್ಥಿಸಲಾಯಿತು.

ಸಮಿತಿ ಸಂಚಾಲಕಿ ಜಯಶ್ರೀ ಸಂಜೀವ್, ಬಿಂದು ಶಾಜಿ, ಲಿನಿಶಾ ಉಣ್ಣಿಕೃಷ್ಣನ್, ಸೌಮ್ಯ ಕೃಷ್ಣ ಇದ್ದರು.