ಸಿದ್ದಾಪುರ, ಮಾ. ೧೭: ಕಾಡನ್ನು ಬೆಂಕಿಯಿAದ ರಕ್ಷಿಸಿ ಎಂಬ ಜಾಗೃತಿ ಅಭಿಯಾನಕ್ಕೆ ದಿಡ್ಡಳ್ಳಿ ಹಾಡಿಯ ಗಿರಿಜನ ಆಶ್ರಮ ಶಾಲೆಯಲ್ಲಿ ಚಾಲನೆ ನೀಡಲಾಯಿತು. ಜನಪರ ಸಂಘ ಮಾಲ್ದಾರೆ ಹಾಗೂ ಡೊಮಿನೊಸ್ ಸಂಘ ವತಿಯಿಂದ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಸಿದ್ದಾಪುರದ ಪರಿಸರ ಪ್ರೇಮಿ ರಾಜೇಂದ್ರ ಸಿಂಗ್ ಗಿಡಕ್ಕೆ ನೀರು ಹಾಕುವ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಪರಿಸರ ಸಂರಕ್ಷಣೆ ಯೊಂದಿಗೆ ಗಿಡ, ಮರಗಳನ್ನು ಉಳಿಸಿ ಬೆಳೆಸಿಕೊಳ್ಳಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅರಣ್ಯ ಪರಿಸರ ಉಳಿದರೆ ಮಾತ್ರ ಶುದ್ಧ ಗಾಳಿ ಮಳೆ ಸಿಗಲಿದ್ದು ಅರಣ್ಯ ಪರಿಸರವನ್ನೇ ನಂಬಿ ಪ್ರಾಣಿ ಪಕ್ಷಿಗಳು ಸ್ವಚ್ಛಂದ ವಾಗಿ ಬದುಕು ಸಾಗಿಸುತ್ತಿವೆ. ಕಾಡ್ಗಿಚ್ಚಿನಿಂದ ಅರಣ್ಯ ಪರಿಸರವನ್ನು ಉಳಿಸಬೇಕಾಗಿದುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಪ್ರತಿ ಯೊಬ್ಬರೂ ಪರಿಸರ ಕಾಳಜಿಯನ್ನು ಮೈಗೂಡಿಸಿಕೊಳ್ಳಬೇಕೆಂದರು. ಚೆನ್ನಂಗಿ ವನ್ಯಜೀವಿ ವಲಯದ ಉಪ ವಲಯ ಅರಣ್ಯಾಧಿಕಾರಿ ಚೆನ್ನವೀರೇಶ್ ಗಾಣಿಗರ ಮಾತನಾಡಿ, ಬೇಸಿಗೆ ಸಂದರ್ಭದಲ್ಲಿ ಕಾಡ್ಗಿಚ್ಚಿನಿಂದ ಅರಣ್ಯ ಪರಿಸರ ನಾಶವಾಗುತ್ತಿದ್ದು ಪ್ರಾಣಿ - ಪಕ್ಷಿಗಳು ಗಿಡ ಮರಗಳು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿವೆ. ಅರಣ್ಯ ಪರಿಸರವನ್ನು ಉಳಿಸಲು ಪ್ರತಿಯೊಬ್ಬರು ಅರಣ್ಯ ಇಲಾಖೆ ಯೊಂದಿಗೆ ಕೈಜೋಡಿಸುವು ದರೊಂದಿಗೆ ಕಾಡ್ಗಿಚ್ಚು ಹರಡದಂತೆ ಜಾಗೃತಿ ವಹಿಸಬೇಕಾಗಿದೆ. ಪರಿಸರ ಕಾಳಜಿಯೊಂದಿಗೆ ಮಾಲ್ದಾರೆ ಜನಪರ ಸಂಘ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿ ಪ್ರತಿ ವರ್ಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮಾಲ್ದಾರೆ ಜನಪರ ಸಂಘದ ಅಧ್ಯಕ್ಷ ಬಾವ ಮಾಲ್ದಾರೆ ಮಾತನಾಡಿ ಸಂಘದ ಮೂಲಕ ವಿದ್ಯಾರ್ಥಿಗಳು ಹಾಗೂ ಅರಣ್ಯದಂಚಿನ ಗ್ರಾಮಸ್ಥ ರಲ್ಲಿ ಬೆಂಕಿಯಿAದ ಕಾಡನ್ನು ರಕ್ಷಿಸಿ ಎಂಬ ಜಾಗೃತಿ ಅಭಿಯಾನ ಹಮ್ಮಿ ಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಸಿದ್ದಲಿಂಗ ಶೆಟ್ಟಿ, ವಿವೇಕಾನಂದ ಮೂಮೆಂಟ್ಸ್ ಸದಸ್ಯ ಕೀರ್ತಿ, ಅರಣ್ಯ ಇಲಾಖೆಯ ಶಿವಪ್ಪ, ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಯಮ್ಮ, ನೆಲ್ಲಿಹುದಿಕೇರಿ ಡಾಮಿನೊಸ್ ಸಂಘದ ಅಧ್ಯಕ್ಷ ಶೌಕತ್ ಅಲಿ, ಜನಪರ ಸಂಘದ ಕಾರ್ಯದರ್ಶಿ ಅಂತೋಣಿ, ಪ್ರಮುಖರಾದ ಪೂರ್ಣಿಮಾ, ವಿನೀಲ್, ಮುನ್ನ, ಶ್ರೇಯಸ್, ರೋಹಿತ್, ಸಮೀರ್, ಫಯಾಜ್, ಮುಸ್ತಫ ಸಕೀರ್, ಸಿಯಾಬ್ ಸೇರಿದಂತೆ ವೈಲ್ಡ್ ಲೈಫ್ ಹಾಗೂ ಆರ್.ಆರ್.ಟಿ. ಸಿಬ್ಬಂದಿಗಳು ಹಾಜರಿದ್ದರು. ಶಾಲಾ ವಿದ್ಯಾರ್ಥಿ ಗಳೊಂದಿಗೆ ಸ್ಥಳೀಯರು ಜಾಗೃತಿ ಮೆರವಣಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು.