ಮುಳ್ಳೂರು, ಮಾ. ೧೮: ಅಂಗಡಿಗಳಿಗೆ ಆಮದುಗೊಳ್ಳುವ ಸರಕುಗಳನ್ನು ತರುವ ವಾಹನಗಳಿಗೆ ಸುಂಕ ವಸೂಲಾತಿ ಮಾಡದಂತೆ ಸಮಿಪದ ಕೊಡ್ಲಿಪೇಟೆ ವರ್ತಕರ ಸಂಘದÀ ವತಿಯಿಂದ ಗ್ರಾ.ಪಂ.ಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೊಡ್ಲಿಪೇಟೆ ಪಟ್ಟಣದಲ್ಲಿ ಅಂಗಡಿಗಳಿಗೆ ಸರಕು ಸಾಮಗ್ರಿಗಳನ್ನು ತರುತ್ತಿರುವ ವಾಹನಗಳಿಗೆ ದುಬಾರಿ ಶುಲ್ಕ ವಸೂಲಾತಿ ಮಾಡುತ್ತಿದ್ದು ಇದರಿಂದ ಅಂಗಡಿಗಳಿಗೆ ಸಾಮಗ್ರಿ ಸರಬರಾಜು ಮಾಡುವ ವಾಹನಗಳು ಬರುತ್ತಿಲ್ಲ. ಹೊಟೇಲ್ ಇತರ ಅಂಗಡಿಗಳಿಗೆ ಭೇಟಿ ನೀಡುವ ಪ್ರವಾಸಿ ವಾಹನಗಳಿಗೂ ಸುಂಕ ವಿಧಿಸುತ್ತಿರುವುದರಿಂದ ಸಮಸ್ಯೆ ಯಾಗಿದೆ. ಈ ಕಾರಣದಿಂದ ವರ್ತಕರಿಗೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಗ್ರಾ.ಪಂ.ಯವರು ಅಂಗಡಿಗಳಿಗೆ ಸರಕು ಸಾಮಗ್ರಿ ಸರಬರಾಜು ಮಾಡುವ ವಾಹನಗಳಿಗೆ ಮತ್ತು ಪ್ರವಾಸಿ ವಾಹನಗಳಿಗೆ ಸುಂಕವನ್ನು ವಿಧಿಸದಂತೆ ಆಗ್ರಹಿಸಿದ್ದಾರೆ. ವರ್ತಕರ ಸಂಘದ ಅಧ್ಯಕ್ಷ ಹೆಚ್.ಸಿ. ಯತೀಶ್‌ಕುಮಾರ್ ನೇತೃತ್ವದಲ್ಲಿ ವರ್ತಕರ ಸಂಘದ ಪ್ರಮುಖರಾದ ಹೆಚ್.ಎಂ. ದಿವಾಕರ್, ಬಿ.ಕೆ. ಯತೀಶ್, ಕುಮಾರ್, ರಮೇಶ್ ಹಾಜರಿದ್ದರು.