ಚೆಟ್ಟಳ್ಳಿ, ಮಾ. ೧೮: ಗಾಂಧಿ ಯುವಕ ಸಂಘ ಕಂಡಕರೆ ಇವರ ವತಿಯಿಂದ ಕೊಡಗು ಜಿಲ್ಲೆಯಲ್ಲೇ ಮೊದಲ ಬಾರಿಗೆ ಸರ್ವಧರ್ಮೀಯ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೇ ವರ್ಷ ನಡೆಯಲಿದ್ದು, ಇದರ ಪ್ರಚಾರ ಕಾರ್ಯಕಮದ ಪೋಸ್ಟರ್ ಬಿಡುಗಡೆಯನ್ನು ಮಾಜಿ ಸಚಿವರು, ಶಾಸಕ, ಯು.ಟಿ. ಖಾದರ್ ಹಾಗೂ ಅರಮೇರಿ ಶ್ರೀ ಕಳಂಚೇರಿ ಮಠದ ವೀರಾಜಪೇಟೆ ಇದರ ಮಠಾಧಿಪತಿಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ನಲ್ವತ್ತೇಕರೆಯಲ್ಲಿ ಪೀಪಲ್ಸ್ ವಿಲೇಜ್ ಮನೆ ಹಸ್ತಾಂತರ ಕಾರ್ಯಕ್ರಮದ ಸಂದರ್ಭ ಬಿಡುಗಡೆಗೊಳಿಸಿದರು.

ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗಾಂಧಿ ಯುವಕ ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭ ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ಅಜೀಜ್ ನೆಲ್ಲಿಹುದಿಕೇರಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಕೀಂ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ಗಾಂಧಿ ಯುವಕ ಸಂಘದ ಸಂಸ್ಥಾಪಕ ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಕಾರ್ಯದರ್ಶಿ ಉನೈಸ್ ಕೆ.ಎಂ., ಅಬ್ದುರಹಮಾನ್ ವೀರಾಜಪೇಟೆ ಹಾಗೂ ಜಮಾಅತೇ ಇಸ್ಲಾಮಿ ಹಿಂದ್ ಸದಸ್ಯರು ಇದ್ದರು.