ಸೋಮವಾರಪೇಟೆ, ಮಾ. ೧೮: ವಿಧಾನ ಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಪಕ್ಷದಿಂದ ಘೋಷಿಸಿರುವ ಗೃಹಲಕ್ಷಿö್ಮÃ ಯೋಜನೆಯ ಗ್ಯಾರಂಟಿ ಕಾರ್ಡ್ ವಿತರಣೆ ಅಭಿಯಾನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆಯಿತು.

ಗೃಹಲಕ್ಷಿö್ಮÃ ಯೋಜನೆಯ ಬಗ್ಗೆ ಮಾಹಿತಿ ಇರುವ ಗ್ಯಾರಂಟಿ ಕಾರ್ಡ್ನ್ನು ಪಟ್ಟಣದ ೬ನೇ ವಾರ್ಡ್ನ ಮನೆಗಳಿಗೆ ವಿತರಿಸಲಾಯಿತು. ಈ ಸಂದರ್ಭ ವಾರ್ಡ್ ಸದಸ್ಯೆ ಶೀಲಾ ಡಿಸೋಜ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ, ಉಪಾಧ್ಯಕ್ಷ ಜಮೀರ್ ಅಹ್ಮದ್, ಎಸ್.ಸಿ. ಘಟಕದ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ, ಪ್ರಮುಖರಾದ ಹೆಚ್.ಸಿ. ನಾಗೇಶ್, ಬಿ.ಜಿ. ಇಂದ್ರೇಶ್, ಕೆ.ಎ. ಆದಂ, ಸುಜಿತ್ ಸೇರಿದಂತೆ ಇತರರು ಅಭಿಯಾನದಲ್ಲಿ ಭಾಗಿಯಾಗಿದ್ದರು.