ಮಡಿಕೇರಿ, ಮಾ. ೧೮: ಕಣ್ಣೂರಿನ ರಿಷಿದೇವ್ ಫೌಂಡೇಶನ್ ವತಿಯಿಂದ ತಾ. ೨೬ ರಂದು ಸಿದ್ದಾಪುರದ ಸ್ವರ್ಣಮಾಲಾ ಸಭಾಂಗಣದಲ್ಲಿ ಭವಿಷ್ಯದ ಪೀಳಿಗೆಗಾಗಿ ಯಾಗಗಳು ಮತ್ತು ಹೋಮಗಳ ಕುರಿತು ದೈವಿಕ ಪ್ರವಚನ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕಿ ನಡಿಕೇರಿಯಂಡ ಸ್ವಾತಿ ಮಂದಣ್ಣ ಬೆಳಿಗ್ಗೆ ೯.೩೦ ರಿಂದ ಸಂಜೆ ೪ ಗಂಟೆವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಯಾಗಗಳು ಮತ್ತು ಹೋಮಗಳ ಪ್ರವಚನ ನಡೆಯಲಿದೆ ಎಂದರು.

ಕಣ್ಣೂರಿನ ರಿಷಿದೇವ್ ಫೌಂಡೇಶನ್‌ನ ಸ್ಥಾಪಕ ಹಾಗೂ ಮುಖ್ಯ ಪೋಷಕ ಸದ್ಗುರು ಋಷಿದೇವ್ ಶ್ರೀ ನರೇಂದ್ರನ್ ಜೀ ಅವರು ದೈವಿಕ ಪ್ರವಚನ ನೀಡಲಿದ್ದಾರೆ. ಡಾ.ಕೃಷ್ಣ ಮಾದಪ್ಪ ಮಾನವೀಯತೆ ಮತ್ತು ಪರಿಸರದ ಮೇಲೆ ಯಾಗಗಳು ಮತ್ತು ಹೋಮಗಳ ಪ್ರಭಾವ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

ಅಧ್ಯಾತ್ಮಿಕ ಚಿಂತಕಿ ಶಾರದಾ ಶ್ರೀಧರ್ "ಗುರುತ್ವಂ" ಎಂಬ ವಿಷಯದ ಕುರಿತು ತಿಳಿಸಲಿದ್ದಾರೆ. ಕಣ್ಣೂರಿನ ರಿಷಿದೇವ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಬಾಬು ಕೇಶವನ್ ಊರ್ಜಮೇವ ಬ್ರಹ್ಮ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಹೆಸರು ನೋಂದಾಯಿಸಿಕೊಳ್ಳಲು ತಾ. ೨೪ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ೯೮೮೬೨೭೮೭೯೦ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.