ಸುಂಟಿಕೊಪ್ಪ, ಮಾ. ೧೮: ಗ್ರಾಮದ ದೇವರ ೪ನೇ ವರ್ಷದ ವಾರ್ಷಿಕ ಪೂಜೋತ್ಸವ ಸುಂಟಿಕೊಪ್ಪ ವ್ಯಾಪ್ತಿಯ ವಿವಿಧ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಗ್ರಾಮ ದೇವರ ವಾರ್ಷಿಕ ಪೂಜೋತ್ಸವದ ಅಂಗವಾಗಿ ತಳಿರು ತೋರಣ ವಿವಿಧ ಬಗೆಯ ಬಣ್ಣ ಹೂಗಳಿಂದ ಪಟ್ಟಣ ಸಿಂಗಾರಗೊAಡಿತ್ತು. ಸುಂಟಿಕೊಪ್ಪದ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಸ್ಥಾನ, ರಾಮ ಸೇವಾ ಸಮಿತಿ, ಅಯ್ಯಪ್ಪ ದೇವಾಲಯ, ಗೌರಿ ಗಣೇಶೋತ್ಸವ, ಮಸಣಕಮ್ಮ ದೇವಸ್ಥಾನ, ವೃಕ್ಷೋದ್ಭವ ಗಣಪತಿ ದೇವಾಲಯ, ಟಿಸಿಎಲ್ ಚಾಮುಂಡೇಶ್ವರಿ ದೇವಸ್ಥಾನ, ಶ್ರೀದೇವಿ ಅಣ್ಣಪ್ಪ ದೇವಾಲಯ, ಬಾಳೆಕಾಡು ಮುತ್ತಪ್ಪ ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳು ನೆರವೇರಿದವು.

ಬೆಳಿಗ್ಗೆ ಅರ್ಚಕ ಗಣೇಶ್ ಭಟ್ ಅವರಿಂದ ಸ್ಥಳ ಶುದ್ಧಿ ಕಲಶದೊಂದಿಗೆ ಪೂಜಾ ವಿಧಿವಿಧಾನಗಳು ನಡೆದವು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗ್ರಾಮ ದೇವತೆಗೆ ಹರಕೆ ಒಪ್ಪಿಸಿ ಭಕ್ತರು ಸಂತೃಪ್ತರಾದರು.

ಸಮಿತಿಯ ಪ್ರಮುಖರಾದ ದಿನು ದೇವಯ್ಯ, ಎ. ಶ್ರೀಧರ್ ಕುಮಾರ್, ಸುರೇಶ್ ಗೋಪಿ, ಪಟ್ಟೆಮನೆ ಉದಯಕುಮಾರ್, ಪಟ್ಟೆಮನೆ ಲೋಕೇಶ್, ಪಟ್ಟೆಮನೆ ಅನಿಲ್ ಕುಮಾರ್, ಬಿ.ಕೆ. ಪ್ರಶಾಂತ್, ಶ್ರೀಧರನ್, ಶಿವಕುಮಾರ್, ಎ. ಲೋಕೇಶ್ ಕುಮಾರ್, ಬಿ.ಬಿ. ಭಾರತೀಶ್, ಮನು ರೈ, ಶಾಂತರಾಮ್ ಕಾಮತ್ ಇತರರು ಇದ್ದರು.