ಕಣಿವೆ, ಮಾ. ೧೬: ಏಳನೆ ಹೊಸಕೋಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವೊಂದನ್ನು ತೆರವುಗೊಳಿಸಿದ ವಿಚಾರಕ್ಕೆ ಸಂಬAಧಿಸಿದAತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಯಂತರರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ಎದುರಾಯಿತು.
ತಾ. ೧೮ ರಂದು ಮುಖ್ಯಮಂತ್ರಿಗಳು ಕೊಡಗು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಕಾರ್ಯಕ್ರಮ ಇರುವುದರಿಂದ ಏಳನೆ ಹೊಸಕೋಟೆಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ ಕಟ್ಟಡವನ್ನು ಪರಿಶೀಲಿಸಲು ಶಾಲೆಯ ಆವರಣಕ್ಕೆ ಆಗಮಿಸಿದ ಸಂದರ್ಭ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ತೆರವು ಗೊಳಿಸಿದ್ದನ್ನು ಕಂಡ ಸಚಿವರು, ‘ಏಕಪ್ಪಾ ಚೆನ್ನಾಗಿದ್ದ ಕಟ್ಟಡ ಒಡೆದಿರೋದು? ಏನು ರಾಷ್ಟಿçÃಯ ಹೆದ್ದಾರಿಯ ಪರಿಧಿಯಲ್ಲೇನಾದರೂ ಇತ್ತಾ? ಏಕೆ ಚೆನ್ನಾಗಿ ದ್ದಂತಹ ಕಟ್ಟಡ ಒಡೆದಿರೋದು?’ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳದಲ್ಲಿದ್ದ ಶಾಲಾಭಿವೃದ್ಧಿ ಸಮಿತಿ ಸದಸ್ಯ ದಿನೇಶ್ ಎಂಬವರು, ಕಟ್ಟಡ ಸುಸ್ಥಿತಿಯಲ್ಲಿದೆ. ಬಹಳಷ್ಟು ಮಕ್ಕಳು ಅಕ್ಷರ ಕಲಿತಂತಹ ಕಟ್ಟಡ. ಒಡೆಯೋದು ಬೇಡ ಎಂದು ಬೇಡಿದರೂ ಕೂಡ ಇಂಜಿನಿಯರ್ ಕೇಳಲಿಲ್ಲ ಎಂದು ಸ್ಥಳದಲ್ಲಿದ್ದ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಅಭಿಯಂತರ ಫಯಾಜ್ ಅವರತ್ತ ತೋರಿಸಿದಾಗ, ಕೆಂಡ ಮಂಡಲರಾದ ಸಚಿವ ನಾಗೇಶ್, ‘ಏನು ಓದಿದ್ದೀಯ ನೀನು. ಇಂಜಿನಿಯರಿAಗ್ ಓದಿರೋರು ಮಾಡುವ ಕೆಲಸಾನಾ ಇದು? ಏತಕ್ಕೆ ಒಡೆದೆ. ಕಟ್ಟಡದ ಗೋಡೆ ಅಷ್ಟೊಂದು ಗಟ್ಟಿ ಮುಟ್ಟಾಗಿ ಕಾಣಿಸ್ತಾ ಇದೆಯಲ್ಲಾ. ನಿಮಗೆಲ್ಲಾ ಒಡೆಯೋದೆ ಚಟವಾಗಿ ಬಿಟ್ಟಿದೆ ಅಲ್ವಾ’ ಎಂದು ತರಾಟೆಗೆ ತೆಗೆದುಕೊಂಡಾಗ, ಸಚಿವರ ಕೋಪಕ್ಕೆ ಗುರಿಯಾದ ಇಂಜಿನಿಯರ್ ಫಯಾಜ್, ಕಟ್ಟಡ ಒಡೆಸಿದ್ದು ನಮ್ಮ ಎಇಇ ವೀರೇಂದ್ರ ಸರ್ ಎಂದರು. ಬಳಿಕ ಕೆಡವಿದ ಕಟ್ಟಡದ ಒಳಕ್ಕೂ ತೆರಳಿ ಪರಿಶೀಲಿಸಿದ ಸಚಿವರು, ಶಾಲಾ ಶಿಕ್ಷಕರು ಮತ್ತು ಪೋಷಕರ ಸಮಿತಿಯ ಕೆಲಸ ಅವರು ಮಾಡಲಿ. ಒಳ್ಳೆಯ ಇಂಜಿನಿಯರ್ ಕೆಲಸ ನೀನು ಮಾಡಪ್ಪಾ ಎಂದು ಸಲಹೆ ನೀಡಿದರು.
ಬಳಿಕ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಟ್ಟಿರುವ ನೂತನ ಕೊಠಡಿಯನ್ನು ಸಚಿವರು ಪರಿಶೀಲಿಸಿದರು. ಸಚಿವರನ್ನು ಶಾಲಾ ಮುಖ್ಯ ಶಿಕ್ಷಕ ಸೋಮಯ್ಯ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿದರು. ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗಧಾಮಯ್ಯ, ಶಿಕ್ಷಕ ಚಿಣ್ಣಪ್ಪ, ಚಂದ್ರಶೇಖರ್ ಮತ್ತಿತರರಿದ್ದರು.