ಸಂಪಾಜೆ, ಮಾ. ೧೬: ಪಯಸ್ವಿನಿ ಯುವಕ ಸಂಘ ಸಂಪಾಜೆ, ಕೊಡಗು ವತಿಯಿಂದ ಸಂಘದ ಸಭೆಯಲ್ಲಿ ಬಡ ಕುಟುಂಬದ ಮನೆಯ ಶ್ರಮದಾನ ಕೆಲಸ ಮಾಡಲು ನಿರ್ಣಯ ಕೈಗೊಂಡ ಮೇರೆಗೆ ಇತ್ತೀಚೆಗೆ ಸಂಪಾಜೆ ಗ್ರಾಮದ ಪಂಜಿಕಲ್ಲು ಜಾನಕಿಯವರ ಹಳೆ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಲು ಕೆಲಸ ನಿರ್ವಹಿಸಲಾಯಿತು.

ಈ ಸಂದರ್ಭ ಪಯಸ್ವಿನಿ ಯುವಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಹಿರಿಯ ಸದಸ್ಯರು ಹಾಗೂ ಕಿರಿಯ ಸದಸ್ಯರು ಪಾಲ್ಗೊಂಡಿದ್ದರು.