ನಾಪೋಕ್ಲು, ಮಾ. ೧೬: ಇಲ್ಲಿಗೆ ಸಮೀಪದ ಹಳೆತಾಲೂಕಿನ ಭಗವತಿ ದೇವಾಲಯದಲ್ಲಿ ಭಗವತಿ ದೇವರ ವಾರ್ಷಿಕ ಹಬ್ಬವು ತಾ. ೧೭ ರಿಂದ (ಇಂದಿನಿAದ) ಜರುಗಲಿದೆ. ಉತ್ಸವದ ಅಂಗವಾಗಿ ಪಟ್ಟಣಿ ಹಬ್ಬ ತಾ. ೧೯ ರಂದು ಜರುಗಲಿದ್ದು, ಅಂದು ವಿಶೇಷ ಪೂಜಾ ವಿಧಿ ವಿಧಾನಗಳು, ಭಕ್ತರಿಗೆ ಅನ್ನಸಂತರ್ಪಣೆ, ಅಪರಾಹ್ನ ದೇವಾಲಯದಲ್ಲಿ ದೇವರ ಮೂರ್ತಿಯನ್ನು ಹೊತ್ತು ನೃತ್ಯ ಬಲಿ ನಡೆಯಲಿದೆ. ತಾ. ೨೦ ರಂದು ಸಂಜೆ ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ಮತ್ತು ಪಟ್ಟಣದಲ್ಲಿ ದೇವರ ಮೂರ್ತಿಯ ಮೆರವಣಿಗೆ ನಡೆಯಲಿದೆ.
ಹಲವು ವರ್ಷಗಳಿಂದ ನಿರಂತರವಾಗಿ ಆಚರಿಸಿಕೊಂಡು ಬರುತ್ತಿರುವ ಪದ್ಧತಿ ಪರಂಪರೆಯAತೆ ಶ್ರೀ ಭದ್ರಕಾಳಿ, ರಾತ್ರಿ ವಿವಿಧ ದೇವರ ಕೋಲ, ನುಚ್ಚುಟೆ, ನರಿಪೂದ, ಅಂಜಿ ಕೂಟ್ ಮೂರ್ತಿಯಡ ಕೋಲ, ಕಲಿಯಾಟ ತಾ. ೨೧ ರಂದು ಅಜ್ಜಪ್ಪ ದೇವರ ಕೋಲ, ವಿಷ್ಣುಮೂರ್ತಿ ದೇವರ ಕೋಲಗಳೊಂದಿಗೆ ಹಬ್ಬಕ್ಕೆ ತೆರೆಬೀಳಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.