ಸುಂಟಿಕೊಪ್ಪ, ಮಾ. ೧೬: ಪಾರ್ವತಮ್ಮ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾದ ಮುತ್ತಪ್ಪ ಕಾಲೋನಿಯ ಅಂಗನವಾಡಿ ಕೇಂದ್ರವನ್ನು ಶಾಸಕ ಅಪ್ಪಚ್ಚು ರಂಜನ್ ಲೋಕಾರ್ಪಣೆ ಮಾಡಿದರು.
ಮುತ್ತಪ್ಪ ಕಾಲೋನಿಯಲ್ಲಿ ಕಾರ್ಯಾಚರಿಸುತ್ತಿದ್ದ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸಿ ಪಾರ್ವತಮ್ಮ ಬಡಾವಣೆಯಲ್ಲಿ ನೂತನವಾಗಿ ರೂ. ೧೭ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಶಾಸಕರು ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕೇಂದ್ರ ಅಕ್ಷರ ಕಲಿಕೆಯ ಕೇಂದ್ರವಾಗಿದೆ. ಕಟ್ಟಡ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಕಾಣುತ್ತಿದೆ. ಕೂಡಲೇ ಮುಂದಿನ ಕಾಮಗಾರಿಯ ಗುಣಮಟ್ಟವನ್ನು ಸರಿಪಡಿಸಿಕೊಡುವಂತೆ ಶಾಸಕರು ಸೂಚಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳಾದ ಪಿ.ಎಫ್. ಸಬಾಸ್ಟೀನ್, ಪಿ.ಆರ್.ಸುನಿಲ್ ಕುಮಾರ್, ರಫೀಕ್ ಖಾನ್, ಸೋಮನಾಥ್, ಶಾಂತಿ, ಗೀತಾ, ವಸಂತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಸಿಡಿಪಿಓ ಅಣ್ಣಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಜೆಸ್ಸಿ ಡಿಸೋಜ, ಸಾವಿತ್ರಿ, ಶೋಭಾ, ಸೇಲಿನಾ,ಲಕ್ಷಿö್ಮ, ಸರಳ, ತಾಹಿರ ಸೇರಿದಂತೆ ಮತ್ತಿತರರು ಇದ್ದರು.