ಗೋಣಿಕೊಪ್ಪಲು, ಮಾ. ೧೬: ಗೋಣಿಕೊಪ್ಪ ನಗರದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ ಚೆಸ್ಕಾಂ ಇಲಾಖೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆ ನಗರದ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ಕೈಗೊಳ್ಳಬೇಕೆಂದು ಮಹಾಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.
ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಮಹಾಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಚೇಂಬರ್ನ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಣಿಕೊಪ್ಪ ವರ್ತಕರ ಹಿತ ಕಾಪಾಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿದೆ. ಪ್ರಮುಖವಾಗಿ ನಗರದಲ್ಲಿ ಏಕಮುಖ ಸಂಚಾರದಿAದ ವರ್ತಕರಿಗೆ ತೀವ್ರ ಅಡಚಣೆ ಉಂಟಾಗಿತ್ತು. ಈ ವೇಳೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರನ್ನು ಭೇಟಿ ಮಾಡಿದ ಚೇಂಬರ್ನ ಹಿರಿಯ ಸದಸ್ಯರು ಇಲ್ಲಿಯ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗಿತ್ತು. ಇದೀಗ ಏಕಮುಖ ಸಂಚಾರ ರದ್ದುಗೊಂಡಿರುವುದರಿAದ ಸಮಸ್ಯೆಗೆ ಪರಿಹಾರ ಲಭಿಸಿದೆ ಎಂದರು.
ನಗರದ ಮುಖ್ಯ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ವ್ಯಾಪಾರ ನಡೆಸುತ್ತಿರುವುದು ನಿರಂತರ ವಾಗಿ ನಡೆಯುತ್ತಿದೆ. ಇದರಿಂದ ವಾಹನ ನಿಲುಗಡೆಗೆ ತೊಂದರೆಯಾಗು ತ್ತಿದೆ. ಪೊಲೀಸರು ಈ ಬಗ್ಗೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದರು ಆಗ್ರಹಿಸಿದರು.
ಉಪಾಧ್ಯಕ್ಷ ಪ್ರಭಾಕರ್ ನೆಲ್ಲಿತಾಯ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನಿಂದ ಮಹಾಸಭೆ ಆಯೋಜಿಸಲು ನಿರ್ಣಯ ಕೈಗೊಳ್ಳಬೇಕು ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಚೇಂಬರ್ ಹಿರಿಯ ಸದಸ್ಯ ಕಾಡ್ಯಮಾಡ ಗಿರೀಶ್ ಗಣಪತಿ, ಈ ಬಗ್ಗೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ಮಹಾಸಭೆ ನಡೆಸಲು ಸೂಕ್ತ ನಿರ್ದೇಶನ ನೀಡುವುದಾಗಿ ತಿಳಿಸಿದರು.
ಜಿಲ್ಲಾ ಚೇಂಬರ್ನ ಮಾಜಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ನಗರದಲ್ಲಿ ಏಕಮುಖ ಸಂಚಾರದಿAದ ವರ್ತಕರಿಗೆ ನಿರಂತರ ಸಮಸ್ಯೆ ಎದುರಾಗಿತ್ತು. ಈ ವೇಳೆ ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾಧಿಕಾರಿ ಭೇಟಿ ಮಾಡಿ ವಿವರ ನೀಡಲಾಗಿತ್ತು. ನಂತರ ಶಾಸಕರ ಅನುದಾನದಿಂದ ಬೈಪಾಸ್ ರಸ್ತೆಯನ್ನು ಉತ್ತಮ ಕಾಂಕ್ರಿಟ್ ರಸ್ತೆಯನ್ನಾಗಿಸಿ ಅಭಿವೃದ್ಧಿ ಪಡಿಸಲಾಗಿದೆ. ಇದೀಗ ದ್ವಿಮುಖ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ. ಇದರಿಂದ ಅನೇಕ ವರ್ಷಗಳ ಸಮಸ್ಯೆಗೆ ಪರಿಹಾರ ದೊರಕಿದೆ ಎಂದರು. ಸಭೆಯಲ್ಲಿ ಹಿರಿಯರಾದ ಕೇಶವ್ ಕಾಮತ್ ಪೊನ್ನಿಮಾಡ ಸುರೇಶ್, ಅಜಿತ್ ಅಯ್ಯಪ್ಪ ಮಾತನಾಡಿದರು.
ಗೋಣಿಕೊಪ್ಪ ಚೇಂಬರ್ನ ಸದಸ್ಯರಾದ ಪಿ.ಕೆ. ಪ್ರವೀಣ್, ಗಣೇಶ್ ರೈ, ಶಿವಾಜಿ ನಗರದಲ್ಲಿ ಉಂಟಾಗುತ್ತಿ ರುವ ಟ್ರಾಫಿಕ್ ಸಮಸ್ಯೆಗೆ ಹಾಗೂ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಚೇಂಬರ್ ಮುಂದಾಗಬೇಕು. ವರ್ತಕರೇ ತಮ್ಮ ಅಂಗಡಿಯ ಮುಂದೆ ವಾಹನಗಳನ್ನು ನಿಲುಗಡೆ ಮಾಡುವುದು ಕಡಿಮೆಯಾಗಬೇಕು ಗ್ರಾಹಕರು ಆಗಮಿಸುವ ವೇಳೆ ವಾಹನ ಪಾರ್ಕಿಂಗ್ಗೆ ಅವಕಾಶ ಸಿಗುವಂತಾಗ ಬೇಕು. ಧ್ವನಿವರ್ಧಕ ಬಳಸಿ ವಾಹನ ಗಳಲ್ಲಿ ವ್ಯಾಪಾರ ಮಾಡುವುದನ್ನು ಪಟ್ಟಣದಲ್ಲಿ ನಿಷೇಧಿಸಬೇಕು ಎಂದರು. ಖಜಾಂಚಿ ಮನೋಹರ್ ಲೆಕ್ಕಪತ್ರ ಮಂಡಿಸಿದರು.
ತೆಕ್ಕಡ ಕಾಶಿ ವರದಿ ವಾಚನ ಮಾಡಿದರು. ಸದಸ್ಯೆ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಪೊನ್ನಿಮಾಡ ಸುರೇಶ್ ವಂದಿಸಿದರು.