ಗೋಣಿಕೊಪ್ಪ ವರದಿ, ಮಾ. ೧೬ : ಕೈಕೇರಿ ಗ್ರಾಮದಲ್ಲಿ ವಾಸವಿರುವ ವೈ. ಮೋಹನ ಅವರ ಪುತ್ರಿ ವೈ. ಎಂ. ಸಂಗೀತ (೨೦) ಕಳೆದ ಶನಿವಾರದಿಂದ ಕಾಣೆಯಾಗಿದ್ದಾರೆ. ಮೈಸೂರಿಗೆ ತೆರಳಿದ್ದ ಯುವತಿ ಮನೆಗೆ ಹಿಂತಿರುಗಿಲ್ಲ. ೫ ಅಡಿ ಎತ್ತರವಿದ್ದಾರೆ. ಕೆಂಪು ಬಣ್ಣದ ಚೂಡಿದಾರ್ ಧರಿಸಿದ್ದರು. ತಂದೆ ಮೋಹನ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪತ್ತೆಯಾದವರು ೦೮೨೭೪-೨೪೭೩೩೩ ಸಂಖ್ಯೆಗೆ ಮಾಹಿತಿ ನೀಡುವಂತೆ ಗೋಣಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.