ಶ್ರೀಮಂಗಲ, ಮಾ. ೧೬: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬದ ಆಶ್ರಯದಲ್ಲಿ ಏಪ್ರಿಲ್ ೧, ೨ ಹಾಗೂ ೩ನೇ ತಾರೀಕಿನಂದು ಟಿ. ಶೆಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಆಯೋಜಿಸಲಾಗಿರುವ ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ ಚೆಟ್ಟಂಗಡ ಕಪ್ ೨೦೨೩ಕ್ಕೆ ವಿವಿಧ ಸಮಿತಿಗಳ ರಚನೆ ನಡೆಯಿತು.
ಕೊಡವ ಕುಟುಂಬಗಳ ನಡುವೆ ಒಗ್ಗಟ್ಟು ಮೂಡಿಸಲು ಹಾಗೂ ಪ್ರಾಚೀನ ಕ್ರೀಡೆಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ೨೦೨೨ರಲ್ಲಿ÷ ಕಕ್ಕಬೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಹಬ್ಬವನ್ನು ಪೊನ್ನೊಲತಂಡ ಕುಟುಂಬದವರು ನಡೆಸಿದರು. ಈ ಸಂದರ್ಭ ೨೦೨೩ರಲ್ಲಿ÷ಕೇರ್ ಬಲಿಪ ನಮ್ಮೆಯನ್ನು ಆಚರಿಸಲು ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬಸ್ಥರು ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಬಾವುಟವನ್ನು ಪಡೆದುಕೊಂಡು ಪೂರ್ವಬಾವಿಯಾಗಿ ಹಲವು ಸಭೆಗಳನ್ನು ನಡೆಸಿ ತಯಾರಿ ನಡೆಸಿಕೊಂಡಿದ್ದಾರೆ.
ಹಬ್ಬದ ಯಶಸ್ವಿಗೆ ಪೂರಕವಾಗಿ ವಿವಿಧ ಸಮಿತಿಗಳನ್ನು ರಚಿಸಲು ತೀರ್ಮಾನಿಸಿ ಚೆಟ್ಟಂಗಡ ಕುಟುಂಬದ ಅಧ್ಯಕ್ಷ ವಿಜಯ ಕಾರ್ಯಪ್ಪ ಅವರ ಮುಂದಾಳತ್ವದಲ್ಲಿ ಸ್ವಾಗತ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಸಮಿತಿ, ಮೈದಾನ ಸಮಿತಿ, ವೇದಿಕೆ ಸಮಿತಿ, ತಾಂತ್ರಿಕ ಸಮಿತಿ, ಊಟೋಪಚಾರ ಸಮಿತಿ, ಸ್ವಚ್ಛತಾ ಸಮಿತಿ, ವೈದ್ಯಕೀಯ ಸಮಿತಿ ಹಾಗೂ ಶಿಸ್ತು ಸಮಿತಿ ಸೇರಿದಂತೆ ಹತ್ತು ಸಮಿತಿಗಳನ್ನು ರಚಿಸಿ ಆಯಾಯ ಸಮಿತಿಗೆ ಜವಾಬ್ದಾರಿ ನೀಡಲಾಯಿತು.
ಈ ಪಂದ್ಯಾಟವು ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ನಡೆಯಲಿದ್ದು, ಪ್ರತಿ ತಂಡದಲ್ಲಿ ೭ ಜನರು ಆಟಗಾರರು ಇರುತ್ತಾರೆ. ಈಗಾಗಲೇ ಕುಟುಂಬ ತಂಡಗಳ ಪ್ರವೇಶ ನೋಂದಣಿಗೆ ವಿವಿಧ ನೋಂದಣಿ ಕೇಂದ್ರಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿದ್ದು, ತಂಡದ ನೋಂದಣಿಗೆ ೨೦.೦೩.೨೦೨೩ ಅಂತಿಮ ದಿನಾಂಕವೆAದು ನಿಗದಿಪಡಿಸಲಾಯಿತು. ಎಲ್ಲಾ ಕೊಡವ ಕುಟುಂಬಗಳು ತಂಡವನ್ನು ನೋಂದಣಿಗೊಳಿಸಬೇಕೆAದು ಅಧ್ಯಕ್ಷರು ಕೋರಿದ್ದಾರೆ. ಸಭೆಯಲ್ಲಿ ಚೆಟ್ಟಂಗಡ ಕುಟುಂಬದ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಭಾಗವಹಿಸಿದ್ದರು.