ಮಡಿಕೇರಿ, ಮಾ. ೧೬: ಬಹುಭಾಷಾ ಚಿತ್ರನಟಿಯಾಗಿರುವ ಕೊಡಗಿನವರಾದ ಸಿನಿಮಾ ತಾರೆ ಹರ್ಷಿಕಾ ಪೂಣಚ್ಚ ಅವರಿಗೆ ಭೋಜ್‌ಪುರಿ ಭಾಷೆಯಲ್ಲಿನ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ದೊರೆತಿದೆ.

ಭೋಜ್‌ಪುರಿ ಭಾಷಾ ಸಿನಿಮಾ ‘ಹಮ್ ಹೆ ರಾಹಿ ಪ್ಯಾರ್ ಕೆ’ ಚಿತ್ರದಲ್ಲಿ ಇವರು ೨೦೨೧ರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮೊದಲ ಚಿತ್ರದಲ್ಲೇ ನೀಡಿರುವ ಉತ್ತಮ ಅಭಿನಯಕ್ಕಾಗಿ ‘ಬೆಸ್ಟ್ ಡೆಬ್ಯೂ ಆಕ್ಟೆçಸ್’ ಪ್ರಶಸ್ತಿ ನೀಡಲಾಗಿದೆ. ನಿನ್ನೆ ದುಬಾಯಿಯಲ್ಲಿ ಇಂಟರ್ ನ್ಯಾಷನಲ್ ಭೋಜ್‌ಪುರಿ ಫಿಲಂ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು ಅಲ್ಲಿ ಹರ್ಷಿಕಾ ಐ.ಬಿ.ಎಫ್.ಎ. ಪ್ರಶಸ್ತಿ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಭೋಜ್‌ಪುರಿ ಭಾಷಾ ಚಿತ್ರ ತಂಡದ ಬಹುತೇಕ ಪ್ರಮುಖ ನಟ - ನಟಿಯರು, ಬಾಲಿವುಡ್ ನಟ ಗೋವಿಂದ್ ಸೇರಿದಂತೆ ಬಾಲಿವುಡ್‌ನ ತಾರೆಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಟ ಗೋವಿಂದ್ ಜೊತೆಗೆ ಹರ್ಷಿಕಾ ಹೆಜ್ಜೆ ಹಾಕಿದ್ದು, ನೆರೆದಿದ್ದವರ ಗಮನ ಸೆಳೆಯಿತು. ಈ ಬಗ್ಗೆ ಹರ್ಷಿಕಾ ಕೂಡ ಸಂತಸ ವ್ಯಕ್ತಪಡಿಸಿದ್ದು, ಇದೊಂದು ಮರೆಯಲಾಗದ ಕ್ಷಣ ಎಂದು ಪ್ರತಿಕ್ರಿಯಿಸಿದ್ದಾರೆ.ಹರ್ಷಿಕಾಗೆ ಭೋಜ್‌ಪುರಿ ಸಿನಿಮಾ ಪ್ರಶಸ್ತಿ