ಕೂಡಿಗೆ, ಮಾ. ೧೬: ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಅಗತ್ಯತೆವುಳ್ಳ ಮಕ್ಕಳು ಕ್ರೀಡಾ ಹಾಗೂ ಕ್ಷೇತ್ರ ಅಧ್ಯಯನ ಪ್ರವಾಸದ ಅಂಗವಾಗಿ ಹಾರಂಗಿಗೆ ಭೇಟಿ ನೀಡಿದ್ದರು.

ಅಣೆಕಟ್ಟೆಯ ಬೃಂದಾವನ ಹಾಗೂ ಸಾಕಾನೆ ಶಿಬಿರವನ್ನು ವೀಕ್ಷಣೆ ಮಾಡಲು ಬಂದ ಮಕ್ಕಳಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಸಿಹಿ ಹಂಚಿ ಬರಮಾಡಿಕೊಂಡರು. ನಂತರ ಹಾರಂಗಿ ಅಣೆಕಟ್ಟೆಯ ಉಪಯೋಗದ ಬಗ್ಗೆ ಮಾಹಿತಿಯಿತ್ತರು.