x
ವೀರಾಜಪೇಟೆ, ಮಾ. ೧೬: ವೀರಾಜಪೇಟೆ ಪುರಸಭೆಯ ೨೦೨೩-೨೪ನೇ ಸಾಲಿನ ಆಯವ್ಯಯದ ೪೬,೫೪,೪೨೨.೦೦ ರೂ.ಗಳ ಉಳಿತಾಯ ಬಜೆಟನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ ಅವರು ಮಂಡಿಸಿದರು. ವೀರಾಜಪೇಟೆ ಪಟ್ಟಣದ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದೀರ, ಕಳೆದ ಸಾಲಿನಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯ ಸಿ.ಕೆ. ಪೃಥ್ವಿನಾಥ್ ಎರಡು ಕಿವಿಗಳಿಗೆ ಚೆಂಡು ಹೂಗಳನ್ನು ಇಟ್ಟು ಬಜೆಟ್ ಸಭೆಯಲ್ಲಿ ಪಾಲ್ಗೊಂಡರು.
ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಸುಶ್ಮಿತಾ, ೩೦ ತಿಂಗಳ ಅಧಿಕಾರವಧಿಯಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಆಡಳಿತ ಮತ್ತು ವೀರಾಜಪೇಟೆ, ಮಾ. ೧೬: ವೀರಾಜಪೇಟೆ ಪುರಸಭೆಯ ೨೦೨೩-೨೪ನೇ ಸಾಲಿನ ಆಯವ್ಯಯದ ೪೬,೫೪,೪೨೨.೦೦ ರೂ.ಗಳ ಉಳಿತಾಯ ಬಜೆಟನ್ನು ಪುರಸಭೆ ಅಧ್ಯಕ್ಷೆ ಸುಶ್ಮಿತಾ ಅವರು ಮಂಡಿಸಿದರು. ವೀರಾಜಪೇಟೆ ಪಟ್ಟಣದ ಜನರ ಕಣ್ಣಿಗೆ ಮಣ್ಣೆರಚುತ್ತಿದ್ದೀರ, ಕಳೆದ ಸಾಲಿನಲ್ಲಿ ಅಭಿವೃದ್ಧಿ ಕಾರ್ಯಗಳು ಶೂನ್ಯವಾಗಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯ ಸಿ.ಕೆ. ಪೃಥ್ವಿನಾಥ್ ಎರಡು ಕಿವಿಗಳಿಗೆ ಚೆಂಡು ಹೂಗಳನ್ನು ಇಟ್ಟು ಬಜೆಟ್ ಸಭೆಯಲ್ಲಿ ಪಾಲ್ಗೊಂಡರು.
ಪುರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷೆ ಸುಶ್ಮಿತಾ, ೩೦ ತಿಂಗಳ ಅಧಿಕಾರವಧಿಯಲ್ಲಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಆಡಳಿತ ಮತ್ತು ಸಂಸದರು, ಶಾಸಕರು ಹಾಗೂ ವಿಶೇಷ ಅನುದಾನ ಎಷ್ಟು ತಂದಿದ್ದೀರ? ಎಂದು ಪ್ರಶ್ನಿಸಿದರು. ನೀರಿನ ಕರ, ವಿದ್ಯುತ್ ದರ, ಮನೆ ತೆರಿಗೆ ಎಲ್ಲವನ್ನು ಹೆಚ್ಚು ಮಾಡಿರುವುದೆ ಸಾಧನೆ ಎಂದು ವ್ಯಂಗ್ಯವಾಡಿದ ಅವರು, ಪಟ್ಟಣದಲ್ಲಿ ಅನೇಕ ಸಮಸ್ಯೆಗಳು ತಾಂಡವ ವಾಡುತ್ತಿವೆ ಎಂದು ದೂರಿದರು. ಈ ಸಂದರ್ಭ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಸದಸ್ಯ ರಾಜೇಶ್ ಮಾತನಾಡಿ, ಕಳೆದ ಬಜೆಟ್ನಲ್ಲಿ ಮಂಡಿಸಿದ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಕ್ಕೆ ಬಂದಿಲ್ಲ. ಈ ಬಜೆಟ್ ಪ್ರತಿಯಲ್ಲಿ ಹಲವಾರು ನ್ಯೂನತೆಗಳಿವೆ. ಕುಡಿಯುವ ನೀರಿನ ವಿಚಾರದಲ್ಲಿ ಡಿಪಿಆರ್ ಮಾಡಲು ಕಳೆದ ೨ ವರ್ಷದಿಂದ ಸಾಮಾನ್ಯ ನಿಧಿಯಿಂದ ರೂ. ೮ ಲಕ್ಷ ವ್ಯಯ ಮಾಡಲಾಗಿದೆ. ಅದನ್ನು ಪ್ರತಿಯಲ್ಲಿ ಶೂನ್ಯ ಎಂದು ನಮೂದಿಸಲಾಗಿದೆ. ಒಂದು ಲಕ್ಷಕ್ಕೆ ಶೇ. ೧೮ರಷ್ಟು ಜಿಎಸ್ಟಿ ನೀಡಬೇಕಾಗಿದೆ. ಉಳಿದ ಹಣದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಲು ಸಾಧ್ಯ. ಬಿಪಿಎಲ್ ಪಡಿತರರ ಚೀಟಿ ಹೊಂದಿರುವವರು ಮೃತಪಟ್ಟಿದಲ್ಲಿ ಅವರ ಅಂತ್ಯಸAಸ್ಕಾರಕ್ಕೆ ಒಂದು ಲಕ್ಷ, ಅಂಗವಿಕಲರಿಗೆ ನೀಡುವ ಸಹಾಯಧನ ರೂ. ೧ ಲಕ್ಷ ಮೀಸಲಿಡಲಾಗಿದೆ. ಅದನ್ನು ರೂ. ೫ ಲಕ್ಷಕ್ಕೆ ಏರಿಸಬೇಕು ಎಂದು ಆಗ್ರಹಿಸಿದರು.
ಸದಸ್ಯೆ ಮನೆಯಪಂಡ ದೇಚಮ್ಮ ಮಾತನಾಡಿ, ಸಾರ್ವಜನಿಕ ಶೌಚಾಲಯ ರಿಪೇರಿಗೆ ೨.೫೦ ಲಕ್ಷ ಇಡಲಾಗಿದೆ. ಅದನ್ನು ೫ ಲಕ್ಷಕ್ಕೆ ಏರಿಸಿ. ಬೀದಿ ದೀಪಗಳ ನಿರ್ವಹಣೆಗೆ ಶೂನ್ಯ ಎಂದು ನಮೂದಿಸಲಾಗಿದೆ. ಇದನ್ನು ಪರಿಶೀಲನೆ ನಡೆಸಿ ಎಂದು ಒತ್ತಾಯಿಸಿದರು.
ಸದಸ್ಯ ಪಟ್ಟಡ ರಂಜಿ ಪೂಣಚ್ಚ ಬಜೆಟ್ ಸರಿಯಿಲ್ಲ ಎಂದು ಆಕ್ಷೇಪಿಸಿದರು. ಮಹಮದ್ ರಾಫಿ ಮಾತನಾಡಿ, ಪುರಸಭೆ ಅಧೀನ ದಲ್ಲಿರುವ ಅಂಗಡಿ ಮಳಿಗೆಗಳಿಂದ ಬಾಡಿಗೆ ವಸೂಲಿ ಮಾಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಹೆಚ್ಚಿನ ಅನುದಾನ ತಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಮತೀನ್ ಮಾತನಾಡಿ, ಸಾರ್ವಜನಿಕ ಸ್ಮಶಾನದಲ್ಲಿ ಸಿಲಿಕಾನ್ ಚೇಂಬರ್ ಹಾಗೂ ಶವ ಸಂಸ್ಕಾರಕ್ಕೆ ಗ್ಯಾಸ್ ವ್ಯವಸ್ಥೆಯನ್ನು ಕಲ್ಪಿಸಲು ಅನುದಾನ ಮೀಸಲಿಡುವಂತೆ ಮನವಿ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಂಡೇಪAಡ ವಿನಾಂಕ್ ಕುಟ್ಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಅಂಜಪರವAಡ ಯಶೋಧಾ, ಮುಖ್ಯಾಧಿಕಾರಿ ಚಂದ್ರಕುಮಾರ್, ಅಭಿಯಂತರ ಹೇಮಕುಮಾರ್ ಉಪಸ್ಥಿತರಿದ್ದರು.