ಮಡಿಕೇರಿ, ಮಾ. ೧೫: ಆಸ್ಟೆçÃಲಿಯಾದಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಗೇಮ್ನಲ್ಲಿ ಸಾಧನೆ ತೋರಿರುವ ಇಬ್ಬರು ಸಹೋದರರು ತಮ್ಮ ವೈಯಕ್ತಿಕ ಖರ್ಚಿನಲ್ಲೇ ಸಿಡ್ನಿಗೆ ತೆರಳಿದ್ದರು ಎಂಬುದಾಗಿ ಪಾಲೆಕಂಡ ಕುಟುಂಬದವರು ತಿಳಿಸಿದ್ದಾರೆ.
ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಬೋಪಯ್ಯ ಸಹೋದರರಿಗೆ ಕುಟುಂಬಸ್ಥರು ಕ್ರೀಡಾಕೂಟದಲ್ಲಿ ಸಾಧನೆ ಮಾಡುವಂತೆ ಶುಭ ಕೋರಿದ್ದರು. ಆದರೆ ಅಲ್ಲಿಗೆ ತೆರಳಿದ ಖರ್ಚು-ವೆಚ್ಚವನ್ನು ಅವರುಗಳೇ ಭರಿಸಿರುವುದಾಗಿ ಕುಟುಂಬದ ಸಮಿತಿಯ ಉಪಾಧ್ಯಕ್ಷ ಪ್ರಭು ಉತ್ತಯ್ಯ ಹಾಗೂ ಜಂಟಿ ಕಾರ್ಯದರ್ಶಿ ಕರುಂಬಯ್ಯ ಅವರುಗಳು ತಿಳಿಸಿದ್ದಾರೆ.