ಗೋಣಿಕೊಪ್ಪಲು, ಮಾ. ೧೬: ಶ್ರೀಮಂಗಲದ ನೂರಾರು ಮಹಿಳೆಯರು ಗೋಣಿಕೊಪ್ಪ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿ ತಮ್ಮ ಮನೆಯಿಂದ ತಂದ ನೂರಾರು ಬಗೆಯ ಹೂ ಗಿಡಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ದಕ್ಷಿಣ ಕೊಡಗಿನ ಶ್ರೀಮಂಗಲ ಭಾಗದ ವಕೀಲೆಯಾಗಿರುವ ಬಾಚಮಾಡ ಲಿಜೆಟ್ ಎಂಬವರು ಕಳೆದ ಎರಡು ವರ್ಷಗಳ ಹಿಂದೆ ಸ್ಥಳೀಯ ಮಹಿಳೆಯರಲ್ಲಿ ಪರಿಸರ ಪ್ರೇಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಹೂತೋಟಗಳನ್ನು ಉತ್ತಮವಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ವಾಟ್ಸಾಪ್ ‘ಬಾಂಡಿAಗ್ ಬ್ಲೂಮ್ಸ್’ ಎಂಬ ಗ್ರೂಪ್ ಮೂಲಕ ಕೈಗೊಂಡರು. ಸಕ್ರಿಯ ಮಹಿಳಾ ಸದಸ್ಯರು ಈ ಗುಂಪಿನಲ್ಲಿ ಸದಸ್ಯರಾದ ತಮ್ಮ ದೈನಂದಿನ ಚಟುವಟಿಕೆಯಲ್ಲಿ ಪರಿಸರ ಕಾಳಜಿ ನಡೆಸುವ ಬಗ್ಗೆ ತಮ್ಮ ಗ್ರೂಪ್ಗಳಲ್ಲಿ ಸಂದೇಶಗಳನ್ನು ರವಾನಿಸಿದರು. ಇದರಿಂದ ಆಕರ್ಷಿತಗೊಂಡ ಮಹಿಳೆಯರು ತಮ್ಮ ಮನೆಯ ಸುತ್ತ ಪರಿಸರವನ್ನು ಕಾಪಾಡುವ ನಿಟ್ಟಿನಲ್ಲಿ ಆಸಕ್ತಿ ವಹಿಸುವಂತೆ ಮಾಡಿದರು.
ರಾಷ್ಟಿçÃಯ ಮಹಿಳಾ ದಿನಾಚರಣೆ ಯಂದು ನೂರಾರು ಮಹಿಳೆಯರು ಒಂದೆಡೆ ಸೇರುವ ಮೂಲಕ ಪರಸ್ಪರ ವಿಚಾರ ವಿನಿಮಯ ನಡೆಸಿದರು. ತಮ್ಮ ಮನೆಗಳಿಂದ ತಂದ ಹಲವು ಬಗೆಯ ಹೂವಿನ ಗಿಡಗಳನ್ನು ಮತ್ತೊಬ್ಬರಿಗೆ ಹಸ್ತಾಂತರಿಸಿ ವಿನೂತನ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರೂಪಿನ ಅಡ್ಮಿನ್ ಲಿಜೆಟ್, ಮಹಿಳೆಯರು ಆಸಕ್ತಿ ವಹಿಸಿದಲ್ಲಿ ಕೊಡಗಿನ ಪರಿಸರವನ್ನು ಇನ್ನಷ್ಟು ಹಸಿರಾಗಿಸಲು ಶ್ರಮಿಸ ಬಹುದಾಗಿದೆ. ಮುಂದಿನ ದಿನದಲ್ಲಿ ಪ್ರತಿ ಮಹಿಳೆಯರು ಕೊಡಗಿನ ಹಸಿರನ್ನು ಮತ್ತಷ್ಟು ಹಸಿರಾಗಿಸಲು ಪ್ರಯತ್ನಿಸಬೇಕು. ನಮ್ಮ ಪರಿಸರವನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂತಹ ವೇದಿಕೆ ಅವಶ್ಯವಿದೆ ಎಂದರು.
ಗ್ರೂಪ್ನ ಸದಸ್ಯೆ ತಡಿಯಂಗಡ ಸೌಮ್ಯ ಕರುಂಬಯ್ಯ ಮಾತನಾಡಿದರು. ಪುಷ್ಪೋದ್ಯಮದಲ್ಲಿ ಸಾಧನೆಗೈದ ಬೊಟ್ಟಂಗಡ ಪುಷ್ಪ ಮಂದಪ್ಪ ಅವರನ್ನು ಮಹಿಳಾ ದಿನಾಚರಣೆ ಅಂಗವಾಗಿ ಸನ್ಮಾನಿಸಿ, ಗೌರವಿಸ ಲಾಯಿತು. ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸ ಲಾಗಿತ್ತು. ದಕ್ಷಿಣ ಕೊಡಗಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಿAದ ಮಹಿಳೆಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಕೊಡಂದೇರ ಗ್ರೇಷ್ಮಾ ಗಣಪತಿ, ಕಂಗAಡ ಸಿಂಧೂರ ಅಯ್ಯಪ್ಪ, ಕಲ್ಲಂಗಡ ಅನು ನಿಜಗುಣ, ಕಾಳಿಮಾಡ ರೇಷ್ಮಾ ಪೂಣಚ್ಚ, ಮಲ್ಲೆಂಗಡ ಪಿಂಕಿ ಮುತ್ತಪ್ಪ, ಆದೇಂಗಡ ತನುಜ ಅಚ್ಚಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಆರಂಭದಲ್ಲಿ ಸದಸ್ಯರಾದ ಅಪ್ಪುಮಣಿಯಂಡ ಶೈಲ ಭೀಮಯ್ಯ ಪ್ರಾರ್ಥಿಸಿ, ಕೊಡಂದೇರ ಗ್ರೇಷ್ಮಾ ಗಣಪತಿ ನಿರೂಪಿಸಿ, ಸ್ವಾಗತಿಸಿ ತಡಿಯಂಗಡ ಸೌಮ್ಯ ಕರುಂಬಯ್ಯ ವಂದಿಸಿದರು.