ಮಡಿಕೇರಿ, ಮಾ. ೧೬: ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ತಾ. ೨೦ ರಂದು ಕೈಗಾರಿಕಾ ಸ್ಪಂದನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಉದ್ದಿಮೆದಾರರ ಸಮಸ್ಯೆ ಚರ್ಚಿಸಲಾಗುವುದು.

ಆದ್ದರಿಂದ ಕೈಗಾರಿಕೆಗಳ ಬಗ್ಗೆ ಸಮಸ್ಯೆಗಳಿದ್ದಲ್ಲಿ, ಲಿಖಿತ ರೂಪದಲ್ಲಿ ಕಾರ್ಯಾಲಯಕ್ಕೆ ತಾ. ೧೮ ರೊಳಗೆ ಇ-ಮೇಲ್ ಜiಛಿರಿಜಞoಜಚಿgu @gmಚಿiಟ.ಛಿom ಮುಖಾಂತರ ಅಥವಾ ಖುದ್ದಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.