ಕೂಡಿಗೆ, ಮಾ ೧೬: ಆಯುಷ್ ಇಲಾಖೆ ವತಿಯಿಂದ ತೊರೆನೂರು ಸಮುದಾಯ ಭವನದಲ್ಲಿ ಆರೋಗ್ಯ ಶಿಬಿರ ಮತ್ತು ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ನೀರು ಬಳಕೆದಾರ ಸಂಘದ ಅಧ್ಯಕ್ಷ ಟಿ.ಕೆ. ಪಾಂಡುರAಗ ನೆರವೇರಿಸಿದರು.
ಆಯುಷ್ ಇಲಾಖೆಯ ಆರೋಗ್ಯ ಸಲಹೆ, ಮಾರ್ಗದರ್ಶನವನ್ನು ಎಲ್ಲರೂ ಸದುಪಯೋಗ ಪಡೆಯಲು ಅವರು ತಿಳಿಸಿದರು. ಇಲಾಖೆಯ ಡಾ. ರೇಖ ಅವರು ಇಲಾಖೆಯ ಯೋಜನೆಗಳ ಬಗ್ಗೆ ಆರೋಗ್ಯದ ಪ್ರಯೋಜನ ಸೇರಿದಂತೆ ಆರೋಗ್ಯಕ್ಕೆ ಸಂಬAಧಿಸಿದ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಬಿ.ಪಿ., ಮಧುಮೇಹ ಪರೀಕ್ಷೆ ನಡೆಸಲಾಯಿತು. ಯೋಗ ಶಿಕ್ಷಕರಾದ ಹೆಚ್.ಆರ್. ಉದಯ ಪ್ರಕಾಶ್ ಮಾತನಾಡಿದರು. ಸ್ಥಳೀಯರಾದ. ಟಿ.ವಿ. ಪ್ರಕಾಶ್, ನಿಂಗಮ್ಮ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು. ಆಯುಷ್ ಸಿಬ್ಬಂದಿಗಳಾದ ಸಚಿನ್ ಮತ್ತು ಪ್ರಿಯ ಔಷಧಿ ವಿತರಿಸಿದರು.