ಮಡಿಕೇರಿ, ಮಾ. ೧೫: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಕೊಡಗು ಗೌಡ ಅರೆಭಾಷೆ ಜನಾಂಗ ಬಾಂಧವರಿಗಾಗಿ ವಧು-ವರರ ಸಮಾವೇಶ ನಡೆಯಿತು.

ನಗರದ ಕೊಡಗು ಗೌಡ ವಿದ್ಯಾ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಯಟ್ ಕೂಡಿಗೆಯ ನಿವೃತ್ತ ಹಿರಿಯ ಉಪನ್ಯಾಸಕಿ ನಾಟೋಳನ ಸಾವಿತ್ರಿ ವಧು ವರರ ಸಮಾವೇಶ ಅರೆಭಾಷೆ ಜನಾಂಗ ಬಾಂಧವರಿಗೆ ಉತ್ತಮ ಸಂಬAಧ ಗಳನ್ನು ಬೆಳೆಸಲು ಹೆಚ್ಚು ಸಹಕಾರಿಯಾಗಿದೆ. ಈ ಕಾರ್ಯಕ್ರಮ ವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಹೊರದೇಶದಲ್ಲಿ ನೆಲೆಸಿರುವ ಕೊಡಗಿನ ಅರೆಭಾಷೆ ಮಂದಿಗೆ ಇಲ್ಲಿನ ಆಚಾರ-ವಿಚಾರಗಳ ಬಗ್ಗೆ ಅರಿವಿರುವು ದಿಲ್ಲ. ನಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಆಚರಿಸಬೇಕೆಂದು ಸಲಹೆೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ ಈ ಬಾರಿ ೭೫ಕ್ಕೂ ಹೆಚ್ಚಿನ ಆಕಾಂಕ್ಷಿಗಳು ವಧು-ವರರ ಸಮಾವೇಶದಲ್ಲಿ ಪಾಲ್ಗೊಂಡಿರುವುದು ಸಂತಸದ ವಿಚಾರವೆಂದರು.

ಉಳುವಾರನ ರೋಶನ್ ವಧು-ವರರನ್ನು ವೇದಿಕೆಗೆ ಬರಮಾಡಿ ಕೊಂಡು ವಿವರಗಳನ್ನು ಸಭೆಗೆ ತಿಳಿಸಿದರು. ಸಂಘದ ನಿರ್ದೇಶಕಿ ಉಮಾದೇವಿ ಪ್ರಾರ್ಥಿಸಿ, ಕಾರ್ಯ ದರ್ಶಿ ಬಾರಿಕೆ ಅಯ್ಯಪ್ಪ ವಂದಿಸಿದರು.

ಸAಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಖಜಾಂಚಿ ಕರಣಯನ ನಾಗೇಶ್, ಜಂಟಿ ಕಾರ್ಯದರ್ಶಿ ಅತ್ತೆöÊಡಿ ಕೃಷ್ಣಪ್ಪ, ನಿರ್ದೇಶಕರುಗಳಾದ ಪೊನ್ನಚ್ಚನ ಸೋಮಣ್ಣ, ಬೈತಡ್ಕ ಬೆಳ್ಯಪ್ಪ, ದಂಬೆಕೋಡಿ ಆನಂದ, ಕುದುಪಜೆ ಶಾರದ, ಸೂದನ ಮೋಹಿನಿ, ಹೊಸೊಕ್ಲು ಟಿ. ಪೊನ್ನಪ್ಪ, ಗೋದೇಟಿರ ರಾಮಯ್ಯ, ಕುಲ್ಲಚೆಟ್ಟಿ ಪೂವಯ್ಯ ಮತ್ತಿತರರು ಪಾಲ್ಗೊಂಡಿದ್ದರು.