ಕೂಡಿಗೆ, ಮಾ. ೧೬ : ೨೬ನೇ ಅಖಿಲ ಭಾರತ ಅರಣ್ಯ ಹಾಕಿ ಕ್ರೀಡಾಕೂಟ ತಾ. ೧೦ ರಂದು ಹರಿಯಾಣದ ಪನಚಕುಲ್ ಕ್ರೀಡಾಂಗಣದಲ್ಲಿ ನಡೆಯಿತು.
ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಹಮ್ಮಿಕೊಂಡಿದ್ದ ರಾಷ್ಟçಮಟ್ಟದ ಕ್ರೀಡಾಕೂಟದಲ್ಲಿ ಕೊಡಗಿನ ದರ್ಶನ್ ನಾಯಕತ್ವದಲ್ಲಿ ಕರ್ನಾಟಕ ತಂಡದ ಪೈನಲ್ನಲ್ಲಿ ಓಡಿಷಾ ರಾಜ್ಯ ತಂಡವನ್ನು ಸೋಲಿಸುವುದರ ಮೂಲಕ ರಾಷ್ಟಿçÃಯ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ದ್ವಿತೀಯ ಸ್ಥಾನವನ್ನು ಓಡಿಷಾ ರಾಜ್ಯ ತಂಡ ಪಡೆದರೆ, ತೃತೀಯ ಸ್ಥಾನವನ್ನು ಛತ್ತೀಸ್ಘಡ ಪಡೆದುಕೊಂಡಿದೆ.
ರಾಷ್ಟಿçÃಯ ಮಟ್ಟದ ಹಾಕಿ ಕ್ರೀಡೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಯ್ಕೆಯಾದ ಆಟಗಾರರಿಗೆ ಕೂಡಿಗೆ ಕ್ರೀಡಾಶಾಲೆಯಲ್ಲಿರುವ ಹಾಕಿ ಟರ್ಫ್ ಮೈದಾನದಲ್ಲಿ ತರಬೇತಿಯನ್ನು ನೀಡಲಾಗಿತ್ತು.
ಕೊಡಗು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರಸವಲ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಮುಕ್ಕ್ಕಾಟೀರ ಜಯ ಅವರ ನೇತೃತ್ವದಲ್ಲಿ ಕೊಡಗಿನ ಅರಣ್ಯ ಇಲಾಖೆಯ ದರ್ಶನ್ ನಾಯಕತ್ವದಲ್ಲಿ ಕೂಡಿಗೆ ಹಾಕಿ ಟರ್ಫ್ ಮೈದಾನದಲ್ಲಿ ಅಭ್ಯಾಸ ಪಂದ್ಯಗಳು ನಡೆದಿದ್ದವು.
ಈ ತಂಡಕ್ಕೆ ಕೂಡಿಗೆ ಕ್ರೀಡಾಶಾಲೆಯ ಹಾಕಿ ತರಬೇತುದಾರ ವೆಂಕಟೇಶ್ ತರಬೇತಿ ನೀಡಿದರು. ತಂಡದಲ್ಲಿ ಕೊಡಗಿನವರಾದ ದರ್ಶನ್ ಅವರು ಫೈನಲ್ ಪಂದ್ಯದಲ್ಲಿ ಎರಡು ಗೋಲುಗಳನ್ನು ಹೊಡೆದು ಗೆಲುವಿಗೆ ಕಾರಣರಾದರು. ಫೈನಲ್ ಹಾಕಿ ಪಂದ್ಯಾಟದಲ್ಲಿ ೩-೨ ಗೋಲುಗಳ ಅಂತರದಲ್ಲಿ ಕರ್ನಾಟಕ ತಂಡ ಗೆಲುವು ಸಾಧಿಸಿದೆ.
ತಂಡದ ನಾಯಕ ಕೊಡಗಿನ ದರ್ಶನ್ ಹಾಗೂ ಸನಚಿತ್ ಸೋಮಯ್ಯ, ಧಾರವಾಡದ ಮಿಥನ್ ಶ್ರೀನಿವಾಸ್, ಶಾಯದ್ ಬಾಷಾ, ನವಿನ ಎನ್., ಜಯವಂತ್, ರಘು, ವಿನೋದ ಕುಮಾರ್, ಮೈಸೂರಿನ ಹೆಚ್.ಬಿ. ಅನಿತ್ರಾಜ್, ಹಾಸನದ ಹರೀಶ್ ಕುಮಾರ್, ಶಶಿಕಾಂತ್, ಚಿಕ್ಕಮಗಳೂರಿನ ಎಲ್.ಜಿ. ಚೇತನ್, ಕೋಲಾರದ ಆರ್. ವೀನು ಗೋಲ್ಕೀಪರ್ ಆಗಿ ಪಂದ್ಯದಲ್ಲಿ ಭಾಗವಹಿಸಿದ್ದರು.