ಪೊನ್ನಂಪೇಟೆ, ಮಾ. ೧೪: ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ನಿಧನಕ್ಕೆ ಪೊನ್ನಂಪೇಟೆ ವಲಯ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಸಲಾಯಿತು. ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಲಕ ಸಂತಾಪ ಸೂಚಿಸಲಾಯಿತು.

ಈ ಸಂದರ್ಭ ಕಾಂಗ್ರೆಸ್ ಹಿರಿಯ ಮುಖಂಡ ಎಂ.ಎಸ್. ಕುಶಾಲಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷ ಅಡ್ಡಂಡ ಸುನಿಲ್, ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಮಹಿಳಾ ಘಟಕದ ಅಧ್ಯಕ್ಷೆ ಕೋಳೆರ ಭಾರತಿ, ಕಾಂಗ್ರೆಸ್ ಮುಖಂಡ ಪುಚ್ಚಿಮಾಡ ವಸಂತ, ತೀತಿರ ಜಯ, ರಾಘವ ಮೂಕಳೇರ ಅಪ್ಪಣ, ಅಡ್ಡಂಡ ಜನಾರ್ದನ, ಎಂ.ಬಿ. ಅನೀಶ್, ಗಿರೀಶ್, ಮತ್ರಂಡ ದಿಲ್ಲು, ಕೋಳೆರ ದಿನು, ಬಾಪು ಕಲ್ಲುಕೋರೆ, ಪಿ.ಎಂ. ಸಾದಲಿ, ಮಂಜು, ಶಾಜಿ ಅಚ್ಚುತ್ತನ್ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಶನಿವಾರಸಂತೆ: ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಅಕಾಲಿಕ ನಿಧನ ಹಿನ್ನೆಲೆ ಅನಂತಕುಮಾರ್ ಅಭಿಮಾನಿ ಬಳಗ ದಿಂದ ಸಂತಾಪ ಸಭೆ ನಡೆಯಿತು.

ಸಮೀಪದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ತಾ.ಪಂ. ಮಾಜಿ ಸದಸ್ಯ ಅನಂತಕುಮಾರ್ ಮಾತನಾಡಿ, ಸರಳ ಸಜ್ಜನಿಕೆಯ ಹಸನ್ಮುಖಿ ಧ್ರುವ ನಾರಾಯಣ ಒಳ್ಳೆಯ ಮನಸ್ಸಿನ ವ್ಯಕ್ತಿ. ಇವರ ಮರಣ ಪಕ್ಷಕ್ಕೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಮುಖಂಡರಾದ ಸುರೇಶ್, ವೀರಪ್ಪ, ಹೂವಯ್ಯ, ಷರೀಫ್, ದಾಮೋದರ್, ಪರಮೇಶ್, ಕಿರಣ್, ಪುಟ್ಟ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಬ್ಲಾಕ್ ಕಾಂಗ್ರೆಸ್

ಸೋಮವಾರಪೇಟೆ: ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಧ್ರುವನಾರಾಯಣ ಅವರ ನಿಧನಕ್ಕೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಅವರ ಸೇವೆಯನ್ನು ಸ್ಮರಿಸಲಾಯಿತು.

ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎನ್. ನಾಗರಾಜು, ಕೆಪಿಸಿಸಿ ಸದಸ್ಯರಾದ ಕೆ.ಎ. ಯಾಕೂಬ್, ಎಸ್.ಸಿ. ಘಟಕದ ಅಧ್ಯಕ್ಷ ಬಿ.ಇ. ಜಯೇಂದ್ರ, ಪ್ರಮುಖರಾದ ಕೆ.ಎ ಆದಮ್, ಜಮೀರ್, ಜೇಕಬ್ ಸೈಮನ್, ಬ್ಲಾಕ್ ಕಾರ್ಯದರ್ಶಿ ಸುನೀಲ್, ಮುಖಂಡರಾದ ವಿ.ಎ. ಲಾರೆನ್ಸ್, ಶೀಲಾ ಡಿಸೋಜ, ಬಿ.ಜಿ. ಇಂದ್ರೇಶ್, ಮೀನಾಕುಮಾರಿ, ಹೆಚ್. ಮಂಜುನಾಥ್, ಸಂಧ್ಯಾ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.